Select Your Language

Notifications

webdunia
webdunia
webdunia
webdunia

ಮಹಿಳೆಯಬ್ಬಳು ಪಾದ್ರಿಯನ್ನು ವೇದಿಕೆ ಮೇಲಿಂದ ತಳ್ಳಿದ್ದೇಕೆ ಗೊತ್ತಾ?

ಮಹಿಳೆಯಬ್ಬಳು ಪಾದ್ರಿಯನ್ನು ವೇದಿಕೆ ಮೇಲಿಂದ ತಳ್ಳಿದ್ದೇಕೆ ಗೊತ್ತಾ?
ಬ್ರೆಜಿಲ್ , ಸೋಮವಾರ, 22 ಜುಲೈ 2019 (06:47 IST)
ಬ್ರೆಜಿಲ್ : ಭಾನುವಾರ ಬ್ರೆಝಿಲ್‌ನ ಸಾವೋ ಪೌಲೋದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಹಿಳೆಯೊಬ್ಬಳು ಪಾದ್ರಿಯೊಬ್ಬನನ್ನು ವೇದಿಕೆ ಮೇಲಿಂದ ತಳ್ಳಿದ ಘಟನೆ ನಡೆದಿದೆ.



ಧಾರ್ಮಿಕ ವಸ್ತುಗಳನ್ನು ಆನ್ ಲೈನ್ ನಲ್ಲಿ ಪ್ರಸಾರ ಮಾಡಲು  ಹೆಸರುವಾಸಿಯಾದ ಬ್ರೆಜಿಲ್ ಕ್ಯಾಥೋಲಿಕ್‌ ಸಮುದಾಯದ ಕ್ಯಾನೊ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಫಾದರ್ ಮಾರ್ಸೆಲೊ ರೊಸ್ಸಿ ಮಾತನಾಡುತ್ತಿರುವಾಗ  ‘ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗುವುದಿಲ್ಲ’ ಎಂದು ಹೇಳಿದ್ದರು.


ಇದರಿಂದ ರೊಚ್ಚಿಗೆದ್ದ ಮಹಿಳೆಯೊಬ್ಬಳು ಭದ್ರತೆಯನ್ನೂ ಭೇದಿಸಿ ಬಂದು ವೇದಿಕೆ ಮೇಲಿಂದ ಪಾದ್ರಿಯನ್ನು ತಳ್ಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಪಾದ್ರಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲೋಸ್ ಆಗುತ್ತಿದೆ ನಿಮ್ಮ ಈ ಪೇಮೆಂಟ್ ಬ್ಯಾಂಕ್