Publish Date: Sat, 20 Jul 2019 (07:56 IST)
Updated Date: Sat, 20 Jul 2019 (07:58 IST)
ಬೆಂಗಳೂರು : ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇಬೇಕು. ಆದರೆ ಸತ್ತ ಮೇಲೆ ಆತ ಮಾಡಿದ ಪಾಪ ಪುಣ್ಯಗಳ ಆಧಾರದ ಮೇಲೆ ಆತ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇದೆ. ಒಂದು ವೇಳೆ ವ್ಯಕ್ತಿಯೊಬ್ಬ ಸಾಯುವಾಗ ಆತನ ಬಳಿ ಈ ವಸ್ತುಗಳು ಇದ್ದರೆ ವ್ಯಕ್ತಿ ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುತ್ತಾರೆ. ಆ ವಸ್ತುಗಳು ಯಾವುದೆಂಬುದನ್ನು ತಿಳಿಯೋಣ ಬನ್ನಿ.
ವ್ಯಕ್ತಿ ಸಾಯುವಾಗ ತುಳಸಿ ಗಿಡ ಅಥವಾ ತುಳಸಿ ಎಲೆ ತಲೆ ಮೇಲಿದ್ದರೆ ಯಮರಾಯನ ಭಯವಿರುವುದಿಲ್ಲ. ತುಳಸಿ ವಿಷ್ಣು ಪ್ರಿಯ. ವಿಷ್ಣುವಿನ ತಲೆ ಮೇಲೆ ಸದಾ ಇರುವಂತಹದ್ದು. ಹಾಗಾಗಿ ಮುಕ್ತಿ ದಾರಿ ಸುಲಭವಾಗುತ್ತದೆ.
ಸಾವಿನ ವೇಳೆ ಗಂಗಾಜಲವನ್ನು ಬಾಯಿಗೆ ಬಿಡುವುದರಿಂದ ಅಥವಾ ಮುಖಕ್ಕೆ ಹಾಕುವುದರಿಂದ ವ್ಯಕ್ತಿಯ ಪಾಪವೆಲ್ಲ ತೊಲಗಿ ಪುಣ್ಯ ಲಭಿಸುತ್ತದೆ. ಆದಕಾರಣ ಯಮ ವ್ಯಕ್ತಿಯನ್ನು ನರಕಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ನಂಬಲಾಗಿದೆ.