Publish Date: Fri, 19 Jul 2019 (11:17 IST)
Updated Date: Fri, 19 Jul 2019 (11:19 IST)
ಬೆಂಗಳೂರು : ಬಹುಮತ ಸಾಬೀತು ಪಡಿಸದೆ ಜಾರಿಕೊಳ್ಳುತ್ತಿರುವ ಸಿಎಂ ಕುಮಾರಸ್ವಾಮಿ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಈಶ್ವರಪ್ಪ, ಒಂದು ಕಡೆ ಎಲ್ಲಾ ಸಚಿವರ ರಾಜೀನಾಮೆ ನಾಟಕ, ಇನ್ನೊಂದು ಕಡೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಕಡತಗಳಿಗೆ ಸಹಿ, ಸಚಿವರೇ ಇಲ್ಲದ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಮುಖ್ಯಮಂತ್ರಿಗಳೇ ಎಂದು ಟಾಂಗ್ ನೀಡಿದ್ದಾರೆ
ಅಲ್ಲದೇ ಇನ್ನೊಂದು ಟ್ವೀಟ್ನಲ್ಲಿ ಒಡೆದ ಸ್ಪೀಕರ್ ಚಿತ್ರವನ್ನು ಪೋಸ್ಟ್ ಮಾಡಿ, ಈ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಬರೆಯುವುದರ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಕಾಲೆಳೆದ ಅವರು ಸ್ಪೀಕರ್ ರಮೇಶ್ ಕುಮಾರ್ ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ.