Select Your Language

Notifications

webdunia
webdunia
webdunia
webdunia

ವಿಶ್ವಾಸ ಮತ ಸಾಬೀತಿಗೆ 1.30 ರ ಡೆಡ್ ಲೈನ್ ನೀಡಿದ ರಾಜ್ಯಪಾಲರು

ವಿಶ್ವಾಸ ಮತ ಸಾಬೀತಿಗೆ 1.30 ರ ಡೆಡ್ ಲೈನ್ ನೀಡಿದ ರಾಜ್ಯಪಾಲರು
ಬೆಂಗಳೂರು , ಶುಕ್ರವಾರ, 19 ಜುಲೈ 2019 (09:57 IST)
ಬೆಂಗಳೂರು: ನಿನ್ನೆ ನಡೆಯಬೇಕಿದ್ದ ವಿಶ್ವಾಸ ಮತ ಪ್ರಕ್ರಿಯೆ ಆಡಳಿತ, ವಿಪಕ್ಷಗಳ ಗದ್ದಲದಿಂದಾಗಿ ನಡೆದಿರಲಿಲ್ಲ. ಆದರೆ ಇಂದು ವಿಶ್ವಾಸಮತ ಸಾಬೀತುಪಡಿಸಲೇಬೇಕೆಂದು ರಾಜ್ಯಪಾಲ ವಜೂಬಾಯ್ ವಾಲಾ ಸಿಎಂ ಕುಮಾರಸ್ವಾಮಿಗೆ ಸಮಯ ನಿಗದಿ ಮಾಡಿದ್ದಾರೆ.


ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸ ಮತ ಸಾಬೀತುಪಡಿಸುವಂತೆ ಸಿಎಂಗೆ ರಾಜ್ಯಪಾಲರು ಪತ್ರಮುಖೇನ ಸೂಚನೆ ನೀಡಿದ್ದಾರೆ. ನಿನ್ನೆಯೇ ಸದನದ ನಡುವೆ ರಾಜ್ಯಪಾಲರು ಸಂದೇಶ ರವಾನಿಸಿದರೂ, ರಾಜ್ಯಪಾಲರಿಗೆ ಈ ವಿಚಾರದಲ್ಲಿ ಸೂಚನೆ ನೀಡುವ ಹಕ್ಕಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ತಳ್ಳಿ ಹಾಕಿದ್ದರು.

ಆದರೆ ಬಿಜೆಪಿ ರಾಜ್ಯಪಾಲರ ಬಳಿ ತೆರಳಿ ಆಡಳಿತ ಪಕ್ಷದ ಸದಸ್ಯರು ವಿಶ್ವಾಸ ಮತ ಯಾಚಿಸುವ ಮುಖ್ಯ ಅಜೆಂಡಾ ಬಿಟ್ಟು ಬೇರೆ ಚರ್ಚೆ ನಡೆಸುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ದೂರಿದ ಹಿನ್ನಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿದ್ದಾರೆ. ಹೀಗಾಗಿ ಇಂದು ಸಿಎಂ ವಿಶ್ವಾಸ ಮತ ಯಾಚನೆ ಮಾಡಬೇಕಿದೆ. ಅದರ ನಡುವೆ ಕಾಂಗ್ರೆಸ್ ವಿಪ್ ಬಗ್ಗೆ ಎತ್ತಿರುವ ಸಂಶಯದ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ಈ ಡೆಡ್ ಲೈನ್ ಏನಾಗಬಹುದು ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಎನ್.ಎಲ್ ಬಿಡುಗಡೆ ಮಾಡಿದೆ 96 ರೂ. ಹೊಸ ಪ್ರೀಪೇಯ್ಡ್ ಪ್ಲ್ಯಾನ್