Publish Date: Tue, 23 Jul 2019 (11:42 IST)
Updated Date: Tue, 23 Jul 2019 (11:44 IST)
ಬೆಂಗಳೂರು: ವಿಧಾಸಭೆ ಕಲಾಪ ಆರಂಭವಾಗಿ ಒಂದು ಗಂಟೆ ತಡವಾಗಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೇರವಾಗಿ ಸ್ಪೀಕರ್ ಕಚೇರಿಗೆ ಭೇಟಿ ನೀಡಿದ್ದಾರೆ.
ಇನ್ನು, ತಮಗೆ ಎದುರಾದ ಬಿಜೆಪಿ ಶಾಸಕರನ್ನು ಸಿದ್ದರಾಮಯ್ಯ ನಗು ನಗುತ್ತಲೇ ಮಾತನಾಡಿಸಿದ್ದೂ ಕಂಡುಬಂತು. ಬಳಿಕ ಸ್ಪೀಕರ್ ಕಚೇರಿಗೆ ತೆರಳಿದರು.
ಅತೃಪ್ತ ಶಾಸಕರ ಪರ ವಕೀಲರು ವಿಚಾರಣೆಗೆ ಆಗಮಿಸಿದ ಹಿನ್ನಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಲಾಪದಿಂದ ಹೊರನಡೆದಿದ್ದರು.