Publish Date: Tue, 23 Jul 2019 (11:04 IST)
Updated Date: Tue, 23 Jul 2019 (11:09 IST)
ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಗಡುವು ವಿಧಿಸಿದ್ದು, ಸದನದ ಇಂದಿನ ಕಲಾಪ ಈಗಾಗಲೇ ಆರಂಭವಾಗಿದೆ.
ಕಲಾಪ 10 ಗಂಟೆಗೆ ಆರಂಭವಾದರೂ ಆಡಳಿತ ಪಕ್ಷದ ಘಟಾನುಘಟಿ ನಾಯಕರೇ ಇನ್ನೂ ಬಂದಿಲ್ಲ. ಅದರಲ್ಲೂ ವಿಶೇಷವಾಗಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮುಂತಾದ ಘಟಾನುಘಟಿ ನಾಯಕರೇ ಬಂದಿಲ್ಲ. ಸಿಎಂ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ನಲ್ಲಿ ದೇವೇಗೌಡರ ಜತೆ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ಇಂದಿನ ಕಲಾಪದಲ್ಲಿ ಸಚಿವ ಯು ಟಿ ಖಾದರ್ ಮಾತು ಆರಂಭಿಸಿದ್ದಾರೆ. ನಿನ್ನೆ ಕೂಡಾ ಸಿಎಂ ಮಧ್ಯಾಹ್ನದ ನಂತರದ ಕಲಾಪಕ್ಕೆ ಹಾಜರಾಗಿರಲಿಲ್ಲ.