Select Your Language

Notifications

webdunia
webdunia
webdunia
Saturday, 12 April 2025
webdunia

ವಿರಾಟ್ ಕೊಹ್ಲಿ ಮನವಿ ಮೇರೆಗೆ ನಿವೃತ್ತಿಯನ್ನು ಮುಂದೂಡಿದ್ದಾರಾ ಧೋನಿ?!

ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 24 ಜುಲೈ 2019 (09:08 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಹೇಳಬಹುದು ಎಂಬ ಊಹಾಪೋಹಗಳಿತ್ತು. ಆದರೆ ಅದು ಸುಳ್ಳಾಯಿತು. ಆದರೆ ಧೋನಿ ನಿವೃತ್ತಿ ಘೋಷಿಸದೇ ಇರಲು ವಿರಾಟ್ ಕೊಹ್ಲಿ ಕಾರಣವಾ?


ಮೂಲಗಳ ಪ್ರಕಾರ ಧೋನಿ ನಿವೃತ್ತಿಗೆ ಮನಸ್ಸು ಮಾಡಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದರಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎನ್ನಲಾಗಿದೆ.

ತಂಡದ ಹಿತದೃಷ್ಟಿಯಿಂದ 2020 ರ ಟಿ20 ವಿಶ್ವಕಪ್ ವರೆಗೆ ತಂಡದಲ್ಲಿರಲು ಕೊಹ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಧೋನಿಗೆ ಯಾವುದೇ ಫಿಟ್ ನೆಸ್ ಸಮಸ್ಯೆಯಿಲ್ಲ. ಹೀಗಾಗಿ ಯುವ ರಿಷಬ್ ಪಂತ್ ರನ್ನು ಪಳಗಿಸಲು ಟಿ20 ವಿಶ್ವಕಪ್ ವರೆಗೂ ಆಡಲು ಅಡ್ಡಿಯಿಲ್ಲ. ಈ ಕಾರಣಕ್ಕೆ ಧೋನಿಯನ್ನು ಕೂಡಲೇ ನಿವೃತ್ತಿಯಾಗಬೇಡಿ ಎಂದು ಕೊಹ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಗಾಗಿ ಧೋನಿ ನಿವೃತ್ತಿಯಾಗೋ ಹಾಗಿಲ್ಲ!