Publish Date: Tue, 23 Jul 2019 (10:50 IST)
Updated Date: Tue, 23 Jul 2019 (10:53 IST)
ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ಧೋನಿ ಸದ್ಯಕ್ಕೆ ನಿವೃತ್ತಿಯಾಗುವ ಹಾಗಿಲ್ಲ. ಅದಕ್ಕೆ ಕಾರಣ ರಿಷಬ್ ಪಂತ್!
ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಪರಿಪೂರ್ಣವಾಗುವವರೆಗೂ ಧೋನಿ ನಿವೃತ್ತಿಯಾಗಬಾರದು ಎಂದು ಬಿಸಿಸಿಐನಿಂದಲೇ ಸೂಚನೆ ರವಾನೆಯಾಗಿದೆಯಂತೆ. ಹೀಗಾಗಿ ಈಗ ರಿಷಬ್ ಪಂತ್ ಗೆ ಅವಕಾಶ ನೀಡಲಾಗುತ್ತಿದ್ದು, ಧೋನಿಯೂ ನಿವೃತ್ತಿ ಘೋಷಿಸಿಲ್ಲ.
ಇತ್ತೀಚೆಗಷ್ಟೇ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಹೇಳಿದ್ದರು. ಧೋನಿ ಕೂಡಾ ನಿವೃತ್ತಿ ಬಗ್ಗೆ ತುಟಿಪಿಟಕ್ ಎಂದಿಲ್ಲ. ಹೀಗಾಗಿ ರಿಷಬ್ ಪಂತ್ ರನ್ನು ಚೆನ್ನಾಗಿ ಪಳಗಿಸುವ ಜವಾಬ್ಧಾರಿ ಧೋನಿ ಹೆಗಲಿಗೇರಿದೆ.