Select Your Language

Notifications

webdunia
webdunia
webdunia
webdunia

ನುಗ್ಗೆ ಸೊಪ್ಪಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?

ನುಗ್ಗೆ ಸೊಪ್ಪಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 23 ಜುಲೈ 2019 (09:14 IST)
ಬೆಂಗಳೂರು : ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ 300 ರೋಗಗಳಿಂದ ದೂರವಿರಬಹುದು ಎಂದು ಹೇಳುತ್ತಾರೆ. ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಅದು ಆರೋಗ್ಯಕ್ಕೆ ಮಾತ್ರವಲ್ಲ ಅದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.




*ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು, ಮುಖದ ಚರ್ಮ ಸುಕ್ಕುಗಟ್ಟಲು ಕಾರಣವಾಗುವ ಪ್ರಿರಯಾಡಿಕಲ್ ಅಂಶವನ್ನು ತಡೆಗಟ್ಟಿ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ನುಗ್ಗೆಕಾಯಿ ಸೊಪ್ಪನ್ನು ನುಣ್ಣಗೆ ರುಬ್ಬಿ ಮುಖ, ಕತ್ತಿಗೆ ಹಚ್ಚಿಕೊಂಡು ಕೆಲ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.


*ನುಗ್ಗೆ ಸೊಪ್ಪನ್ನು ಲಿಂಬೆಹಣ್ಣಿನ ರಸದೊಂದಿಗೆ ಅರೆದು ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

* ನುಗ್ಗೆಸೊಪ್ಪಿನ ಎರಡು ಚಮಚ ರಸವನ್ನು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.


* ನುಗ್ಗೆಸೊಪ್ಪಿಗೆ ಒಂದು ಚಮಚ ಅರಿಶಿಣ, ಲಿಂಬೆರಸ, ಗಂಧದ ಪುಡಿ ಸೇರಿಸಿ, ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ನಂತೆ ಬಳಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡಿ ನೋವಿನಿಂದಾಗಿ ‘ಅದನ್ನು’ ಮಾಡುವುದೇ ಕಷ್ಟವಾಗಿದೆ!