Select Your Language

Notifications

webdunia
webdunia
webdunia
webdunia

ಕೂಲಿಗಳಿಗೆ ಸಚಿವರು ಹೇಳಿದ್ದೇನು?

ಕೂಲಿಗಳಿಗೆ ಸಚಿವರು ಹೇಳಿದ್ದೇನು?
ವಿಜಯಪುರ , ಭಾನುವಾರ, 19 ಮೇ 2019 (13:32 IST)
ಕೂಲಿ ಕಾರ್ಮಿಕರೊಂದಿಗೆ ಸಚಿವರು ಸಮಾಲೋಚನೆ ನಡೆಸಿದ ಘಟನೆ ನಡೆದಿದೆ.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಸಚಿವ ದೇಶಪಾಂಡೆ.

ವಿಜಯಪುರ ನಗರದ ಗೋದಾವರಿ ಹೊಟೇಲ್ ಬಳಿ ನಿಲ್ಲುವ ಕೂಲಿ ಕಾರ್ಮಿಕರನ್ನು ಕಂಡು ಮಾತನಾಡಿಸಿದ್ದಾರೆ. ನಿಮಗೆ ನಿಮ್ಮ‌ ಗ್ರಾಮದಲ್ಲೇ ಪಂಚಾಯತಿ ಮಟ್ಟದಲ್ಲಿ ಉದ್ಯೋಗ ನೀಡಲಾಗುವದು. ನೀವು ದಿನಕ್ಕೆ ಐನೂರು ಸಂಬಳ ಕೇಳಿದರೆ ಅದು ಕೊಡಲಾಗುವದಿಲ್ಲ.

ಆದರೆ ನಿಮ್ಮ ಹಳ್ಳಿಗಳಲ್ಲೇ ಪಂಚಾಯತಿ ಮಟ್ಟದಲ್ಲಿ ಕೆಲಸ ಕೊಡುತ್ತೇವೆ. ನಿಮಗೆ ನೀರು ಮೇವಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಆರ್.ವಿ.ದೇಶಪಾಂಡೆ.

ಆರ್.ವಿ.ದೇಶಪಾಂಡೆಗೆ ಗೃಹ ಸಚಿವ ಎಮ್.ಬಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಎಮ್.ಸಿ.ಮನಗೂಳಿ, ಶಾಸಕ ಯಶವಂತ ರಾಯಗೌಡ ಪಾಟೀಲ್ ಸಾಥ್ ನೀಡಿದ್ರು.

 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಟೆಂಪಲ್ ರನ್