Publish Date: Fri, 17 May 2019 (17:10 IST)
Updated Date: Fri, 17 May 2019 (17:12 IST)
ಕುಂದಗೋಳಕ್ಕೆ ಯಾರು ಕಾಂಗ್ರೇಸ್ ನಾಯಕರು??? ಹೀಗಂತ ಕೈ ಪಡೆಯ ನಾಯಕರೇ ಸಾಮಾಜಿಕ ಜಾಲತಾಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪೋಸ್ಟ್ ಹರಿಬಿಟ್ಟಿದ್ದಾರೆ.
ಕುಂದಗೋಳ ಬೈ ಎಲೆಕ್ಷನ್ ಮುಗಿಯೋಕೆ ಬಂದರೂ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಅಸಮಾಧಾನ ಈಗಲೂ ಮುಂದುವರಿದಿದೆ.
ಡಿಕೆಶಿ ವಿರುದ್ಧ ಕಾಂಗ್ರೆಸ್ ಜಿಲ್ಲಾಮಟ್ಟದ ಪದಾಧಿಕಾರಿಯಿಂದಲೇ ಅಸಮಾಧಾನ ಹೊರಬಿದ್ದಿದೆ.
ಫೇಸ್‌ಬುಕ್ ನಲ್ಲಿ ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಗಿರೀಶಗೌಡ ಮುದಿಗೌಡರ.
ಗಿರೀಶಗೌಡ, ಧಾರವಾಡ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಡಿ.ಕೆ. ಶಿವಕುಮಾರ ನಮಗೆ ಸ್ಪಂದಿಸುತ್ತಿಲ್ಲ. ಕುಂದಗೋಳಕ್ಕೆ ಯಾರು ಕಾಂಗ್ರೆಸ್ ನಾಯಕರು??? ಅಂತಾ ಪೋಸ್ಟ್ ಹಾಕಿದ್ದಾರೆ.
ಪೋಸ್ಟ್ ಮೂಲಕ ಕಾಂಗ್ರೆಸ್ ದೊಳಗಿನ ಅಸಮಾಧಾನ ಹೊರಹಾಕಿದ್ದಾರೆ ಗಿರೀಶಗೌಡ. ಡಿಕೆಶಿ ಬಂದಾಗಿನಿಂದ ಸ್ಥಳೀಯ ನಾಯಕರಿಗೆ ಬೆಲೆ ಇಲ್ಲ ಅನ್ನೋ ಆರೋಪಕ್ಕೆ ಪುಷ್ಠಿ ನೀಡಿದಂತಿದೆ ಈ ಪೋಸ್ಟ್.