Publish Date: Fri, 17 May 2019 (16:53 IST)
Updated Date: Fri, 17 May 2019 (16:58 IST)
ರಾಜೀವ್ ಗಾಂಧಿ ಬಗ್ಗೆ ಸಂಸದ ನಳಿನ್ ಕುಮಾರ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಸಂಸದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ದೇಶದ ಐಕ್ಯತೆಗಾಗಿ ಪ್ರಾಣ ಕೊಟ್ಟ ನಾಯಕರಾಗಿದ್ದಾರೆ. ಇಂಥವರ ಬಗ್ಗೆ ಅವಹೇಳನಕಾರಿ ಹೇಳಿಕೆ ಸರಿಯಲ್ಲ. ಇಂತಹ ವಿಚಾರಧಾರೆ ಮನಸ್ಸಿನವರು ಹೆಚ್ಚಾಗುತ್ತಿರುವುದರಿಂದ ದೇಶ ದುಸ್ಥಿತಿಗೆ ಬಂದು ತಲುಪಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನಾದರೂ ನಾಲಿಗೆ ಬಿಗಿ ಹಿಡಿದು ಮಾತನಾಡತಕ್ಕದ್ದು ಮಾಡಬೇಕು ಎಂದು ವಾರ್ನಿಂಗ್ ಮಾಡಿದ್ರು.
ಮಹಾತ್ಮ ಗಾಂಧಿಯವರು ಯಾರು? ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು. ದೇಶಕ್ಕಾಗಿ ಪ್ರಾಣಬಿಟ್ಟ ಗಾಂಧಿಜಿಯವರನ್ನು ಗುಂಡಿಟ್ಟು ಕೊಂದ ಗೋಡ್ಸೆಯನ್ನು ದೇವರು ಎನ್ನುತ್ತಿದ್ದಾರೆ.
ಒಂದು ಕಡೆ ರಾಷ್ಟ್ರಪಿತ ಅಂತ ಗಾಂಧಿ ಅವರ ಸಮಾಧಿ ಮುಂದೆ ಮೋದಿ ತೆಲೆಬಾಗುತ್ತಾರೆ. ಇನ್ನೊಂದಡೆ ಇಂತಹ ಹೇಳಿಕೆ ಕೊಡ್ತಾರೆ. ಒಳಗೊಂದು ಹೊರಗೊಂದು ಇರುವ ಜನರಿಂದಲೇ ದೇಶಕ್ಕೆ, ಸಮಾಜಕ್ಕೆ ತೊಂದರೆ ಇದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.