Publish Date: Thu, 16 May 2019 (14:50 IST)
Updated Date: Thu, 16 May 2019 (14:52 IST)
ಚಿಂಚೋಳಿ ಉಪ ಚುನಾವಣೆಯಲ್ಲಿ ವ್ಹಿ.ಸೋಮಣ್ಣ, ರವಿಕುಮಾರ್ ಜೋಡೆತ್ತಾಗಿ ದುಡಿದು ಕಾಂಗ್ರೆಸ್‌ನ್ನು ಧೂಳಿಪಟ ಮಾಡಿದ್ದಾರೆ. ಹೀಗಂತ ಬಿಜೆಪಿ ಮಾಜಿ ಸಚಿವ ಹೇಳಿದ್ದಾರೆ.
ಐವತ್ತು ವರ್ಷಗಳ ಕಾಲ ಕೋಲಿ ಸಮಾಜಕ್ಕೆ ಹೋರಾಟ ಮಾಡಿದ್ದು ಸಾರ್ಥಕವಾಗಿದೆ. ನಮ್ಮ ಮನೆಯಲ್ಲಿ ಯಾವ ಮಂಗಲ ಕಾರ್ಯ ಆಗುವಂತಿಲ್ಲ, ಮಗ ಇಲ್ಲ, ಮಗಳಿಲ್ಲ. ಕೋಲಿ ಸಮಾಜಕ್ಕಾಗಿ ದುಡಿಯುವುದೇ ಮಂಗಲ ಕಾರ್ಯವಾಗಿದೆ ನನಗೆ. ಹೀಗಂತ ಬಿಜೆಪಿ ಬೆಂಬಲಿತ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಹೇಳಿಕೆ ನೀಡಿದ್ದಾರೆ.
ಚಿಂಚೋಳಿಯಲ್ಲಿ ಮಾತನಾಡಿದ ಅವರು, ದಿವಂಗತ ವಿಠ್ಠಲ್ ಹೇರೂರ್ ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸಿ ಅಂತಾ ಎರಡು ವರ್ಷ ಸತ್ಯಾಗ್ರಹ ಮಾಡಿದ್ರು. ನಾನು ಗುಲಬರ್ಗಾದಲ್ಲಿ ಉರುಳುಸೇವೆ ಮಾಡಿದೆ.
ಐವತ್ತು ವರ್ಷ ಕೋಲಿ ಸಮಾಜದಿಂದ ಆರಿಸಿ ಹೋದ ಖರ್ಗೆ ಒಂದು ದಿನವೂ ಕೋಲಿ ಸಮಾಜದ ಹೆಸರು ಹೇಳಿಲ್ಲ ಎಂದರು. ರಾಹುಲ್ ಗಾಂಧಿ ಪ್ರೈಮ್ ಮಿನಿಸ್ಟರ್ ಆಗೋದು ತಿರುಕನ ಕನಸು. ಎಸ್‌ಟಿ ಫೈಲ್ ನಿಮ್ಮ ಕೈಯಲ್ಲಿಲ್ಲ ಸಿದ್ದರಾಮಯ್ಯ, ಖರ್ಗೆರವರೇ ಮೋದಿರವರ ಕೈಯಲ್ಲಿದೆ.
ಎಸ್‌ಟಿ ಮಾಡಿದ್ರೆ ನಮ್ಮ ಇಕ್ವಲ್ ಆಗ್ತಾರೆ ಅಂತಾ ತಲೆ ಮೇಲೆ ಕಾಲಿಟ್ರು ಅಂತ ಮಲ್ಲಿಕಾರ್ಜುನ ಖರ್ಗೆಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಟಾಂಗ್ ನೀಡಿದ್ದಾರೆ.