Publish Date: Thu, 16 May 2019 (15:51 IST)
Updated Date: Thu, 16 May 2019 (15:52 IST)
ಮೈತ್ರಿ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಚ್ಚಾಟದಿಂದ ಮೈತ್ರಿ ಸರ್ಕಾರ ಪತನವಾಗುತ್ತೆ ಅಂತ ಬಿಜೆಪಿ ಶಾಸಕ ಹೇಳಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್ ಬಳಿ ಹಣ, ಅಧಿಕಾರದ ಬಲ ಜಾಸ್ತಿಯಿದೆ. ಇಂಗು- ತೆಂಗು ಇದ್ರೆ ಮಂಗ ನನ್ನ ಮಗನೂ ಅಡುಗೆ ಮಾಡುತ್ತಾನೆ ಅಂತ ಹುಬ್ಬಳ್ಳಿಯಲ್ಲಿ ಸಿ.ಟಿ. ರವಿ ಹೇಳಿಕೆ ವ್ಯಂಗ್ಯವಾಡಿದ್ದಾರೆ.
ಎಲ್ಲ ಸಂದರ್ಭದಲ್ಲಿಯೂ ಎಲ್ಲರ ಆಟಗಳು ನಡೆಯಲ್ಲ. ಅಪ್ಪನಾಣೆಗೂ ಮೋದಿ ಪ್ರಧಾನಿ ಆಗಲ್ಲ ಅಂತಾ ಹೇಳಿದ್ರು. ಈಗ ಸಿದ್ದರಾಮಯ್ಯ ಅಪ್ಪನ ಬಗ್ಗೆ ನಾವೇನು ಹೇಳೋಣ? ಎಂದು ಪ್ರಶ್ನಿಸಿದ್ರು.
ಪ್ರಜಾಪ್ರಭುತ್ವದ ಗುತ್ತಿಗೆ ಯಾರ ಕೈಯ್ಯಲ್ಲೂ ಇಲ್ಲ. ಅತೃಪ್ತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಣದವರಾ? ಅನ್ನೋದು ಮೇ 23ರ ನಂತರ ಗೊತ್ತಾಗುತ್ತೆ. ಕೆಲವು ಸಂಗತಿಗಳನ್ನ ಈಗ ಹೇಳಲ್ಲ. ನಾನು ರಾಜ್ಯಾಧ್ಯಕ್ಷ ಆಗುವುದರ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತೆ. ಯೋಗ್ಯತೆ ಇರುವವರಿಗೆ ಅಧಿಕಾರ ಸಿಗುತ್ತದೆ ಎಂದರು.