Select Your Language

Notifications

webdunia
webdunia
webdunia
webdunia

ಚಿಂತಾಮಣಿ ವಿಷ ಪ್ರಸಾದ ಸೇವನೆ ಪ್ರಕರಣ ಎಲ್ಲಿಗೆ ಬಂತು?

ಚಿಂತಾಮಣಿ ವಿಷ ಪ್ರಸಾದ ಸೇವನೆ ಪ್ರಕರಣ ಎಲ್ಲಿಗೆ ಬಂತು?
ಚಿಕ್ಕಬಳ್ಳಾಪುರ , ಶುಕ್ರವಾರ, 17 ಮೇ 2019 (13:00 IST)
ಇಡೀ ರಾಜ್ಯವನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಪೊಲೀಸರು.  
ಚಿಂತಾಮಣಿ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಿದ್ದಾರೆ ಚಿಂತಾಮಣಿ ನಗರ ಪೊಲೀಸರು.
ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ ಚಿಂತಾಮಣಿ ಡಿವೈಎಸ್ಪಿ ಶ್ರೀನಿವಾಸ್.  

ಗಂಗಮ್ಮ ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಹಂಚಿಕೆ ಹಿನ್ನೆಲೆಯಲ್ಲಿ ದುರ್ಘಟನೆ ನಡೆದಿತ್ತು. ಚಿಂತಾಮಣಿ ನಗರದ ನಾರಸಿಂಹಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರನ್ನು ಬಲಿ ಪಡೆದಿತ್ತು ವಿಷ ಪ್ರಸಾದ. ಎಂಟು ಜನ ಭಕ್ತಾಧಿಗಳು ಅಸ್ವಸ್ಥರಾಗಿದ್ದರು.

ಜನವರಿ ಇಪ್ಪತೈದರಂದು ದೇವಸ್ಥಾನದಲ್ಲಿ ವಿಷ ಪ್ರಸಾದ ಹಂಚಿಕೆಯಾಗಿತ್ತು. ಅಕ್ರಮ ಸಂಭಂದದ ಹಿನ್ನೆಲೆಯಲ್ಲಿ ವಿಷ ಬೆರೆಸಿರುವುದಾಗಿ ದೂರು ದಾಖಲಾಗಿತ್ತು. ಪೊಲೀಸರಿಗೆ ಸಮಗ್ರ ತನಿಖೆಗೆ ಆದೇಶಿಸಿತ್ತು ನ್ಯಾಯಾಲಯ. ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮೀ, ಲೋಕೇಶ್, ಪಾರ್ವತಮ್ಮ , ಅಮರಾವತಿ ವಿರುದ್ಧ ದೋಷಾರೋಪ ಸಲ್ಲಿಸಿದ್ದಾರೆ ಪೊಲೀಸರು.
ಲಕ್ಷ್ಮಿ ಮತ್ತು ಲೋಕೇಶ ನಡುವಿನ ಅಕ್ರಮ ಸಂಭಂದವೇ ಪ್ರಕರಣದ ಪ್ರಮುಖ ಕಾರಣ ಎಂದು ಪೊಲೀಸ್ ವಿಚಾರಣೆಯಲ್ಲಿ ಅಂತಿಮ ಗೊಂಡಿದೆ ಎನ್ನಲಾಗಿದೆ.

ಇನ್ನುಳಿದ ಮೂವರು ಆರೋಪಿಗಳು ಈ ಕೃತ್ಯಕ್ಕೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಕಂಬಿ ಎಣಿಸಬೇಕಾಗಿದೆ . ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿದೆ ಗಂಗಮ್ಮ ದೇವಸ್ಥಾನ.




Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಜಿಬ್ರಾ ಸಾವಿನ ಸುತ್ತ ಅನುಮಾನ