Select Your Language

Notifications

webdunia
webdunia
webdunia
webdunia

ಹೆಂಡ್ತಿ ಬಿಟ್ಟುಹೋದಳೆಂದು ಪುತ್ರಿ ಸೇರಿ ಮೂವರನ್ನು ಹತ್ಯೆಗೈದ ವ್ಯಕ್ತಿ ನಂತರ ಮಾಡಿದ್ದೇನು ಗೊತ್ತಾ

Shot dead

Sampriya

ಚಿಕ್ಕಮಗಳೂರು , ಮಂಗಳವಾರ, 1 ಏಪ್ರಿಲ್ 2025 (23:47 IST)
ಚಿಕ್ಕಮಗಳೂರು: ಹೆಂಡತಿಯು ತನ್ನಿಂದ ದೂರವಾದಳು ಎಂದು ಕೋಪಗೊಂಡ ವ್ಯಕ್ತಿಯೊಬ್ಬ ತನ್ನ 6 ವರ್ಷದ ಪುತ್ರಿ ಸೇರಿದಂತೆ ಮೂವರನ್ನು ಗುಂಡು ಹಾರಿಸಿ ಹತ್ಯೆಗೈದು, ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಆರೋಪಿಯು ಗುಂಡು ಹಾರಿಸುವ ಮುನ್ನ ರತ್ನಾಕರ ವಿಡಿಯೊ ಮಾಡಿದ್ದಾನೆ. ಅದರಲ್ಲಿ ತನಗೆ ಕುಟುಂಬದವರು ಮೋಸ ಮಾಡಿದ್ದಾರೆ. ಎರಡು ವರ್ಷದಿಂದ ಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಿದ್ದಾನೆ.

ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ಈ ಘಟನೆ ನಡೆಸಿದೆ. ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ.

ಕಡಬಗೆರೆಯ ಶಾಲೆಯೊಂದರ ವಾಹನ ಚಾಲಕ ರತ್ನಾಕರ ತಮ್ಮ ಕುಟುಂಬದ ಮೂವರನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ
ಅತ್ತೆ ಜ್ಯೋತಿ (50), ಮಗಳು ಮೌಲ್ಯ (6) ಮತ್ತೆ ನಾದಿನಿ ಸಿಂಧು(24) ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರದಲ್ಲಿ ರತ್ನಾಕರ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 18ಕ್ಕೆ ಏರಿದೆ