Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ಹಿಂದೂಗಳು ಏನ್ ದ್ರೋಹ ಮಾಡಿದ್ದಾರೆ: ಯಡಿಯೂರಪ್ಪ ಪ್ರಶ್ನೆ

BS Yediyurappa

Sampriya

ಬೆಂಗಳೂರು , ಮಂಗಳವಾರ, 1 ಏಪ್ರಿಲ್ 2025 (18:00 IST)
ಬೆಂಗಳೂರು: ಕಾಂಗ್ರೆಸ್‌ಗೆ ಅಜೀರ್ಣ ಆಗುವಷ್ಟು ಬಹುಮತ ನೀಡಿದ್ದರಿಂದ ಇಂದು ಜನ ಹಿತ ಮರೆತು ರಾಜ್ಯದಲ್ಲಿ ತುಘಲಕ್ ದರ್ಬಾರ್‌ ಅನ್ನು  ನಡೆಸುತ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ ಅವರು, ಸಿಎಂ ಆದವರು ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ಆದರೆ ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ನಾಲ್ಕು ಪರ್ಸೆಂಟ್‌ ಮೀಸಲಾತಿ ನೀಡಿ, ಹಿಂದೂಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರತಿ ತಿಂಗಳು ಒಂದಲ್ಲ ಒಂದು ಬೆಲೆ ಏರಿಕೆ ಮಾಡಿದೆ. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾದರೆ  ಕರ್ನಾಟಕದಲ್ಲಿ ಮಾತ್ರ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡಿದ್ದಾರೆ. ವಿಶೇಷವಾಗಿ ಮೆಟ್ರೋ ದರವನ್ನು %100ರಷ್ಟು ಹೆಚ್ಚಿಸಿದ್ದಾರೆ. ಜನಸಾಮಾನ್ಯರು ಬಳಸುವ ಹಾಲಿನ ದರ ಇಂದೆಂದೂ ಇಲ್ಲದ ರೀತಿಯಲ್ಲಿ ಏರಿಕೆ ಮಾಡಿದ್ದಾರೆ.

ಬಹಳ ಮುಖ್ಯವಾಗಿ ವಿದ್ಯುತ್ ದರವನ್ನು ಪ್ರತಿ ಯ್ಯೂನಿಟ್‌ಗೆ 36ಪೈಸೆ ಹೆಚ್ಚು ಮಾಡಿದ್ದಾರೆ. ಈ ಸರ್ಕಾರ ಬಂದ್ಮೇಲೆ ಎರಡು ಬಾರಿ ವಿದ್ಯುತ್ ದರ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಉಸಿರುಗಟ್ಟುವ ಪರಿಸ್ಥಿತಿ ಬಂದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಯತ್ನಾಳ್ ಆಡಿಯೋ, ವಿಡಿಯೋ ಬಿಡುಗಡೆ ಮಾಡ್ಲ: ರೇಣುಕಾಚಾರ್ಯ ಹೊಸ ಬಾಂಬ್‌