Publish Date: Fri, 14 Dec 2018 (06:54 IST)
Updated Date: Fri, 14 Dec 2018 (07:06 IST)
ಬೆಂಗಳೂರು : ಕಾಮುಕನೊಬ್ಬ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ಡಿಸೆಂಬರ್ 8 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದು ಎಳೆದು ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಆಗ ಮಹಿಳೆ ಕಿರುಚಿಕೊಂಡಿದ್ದ ಕಾರಣ ಸುತ್ತಮುತ್ತಲಿನವರು ಬಂದು ಕಾಮುಕನನ್ನು ಥಳಿಸಿ ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದಾಗಿ ತಿಳಿದುಬಂದಿದ್ದು, ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.