Publish Date: Thu, 13 Dec 2018 (15:03 IST)
Updated Date: Thu, 13 Dec 2018 (15:05 IST)
ಬೆಂಗಳೂರು : ಸಿದ್ದರಾಮಯ್ಯ ವಿದೇಶದಿಂದ ದಿಢೀರ್ ವಾಪಾಸಾದ ಹಿನ್ನಲೆ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಕಾಂಗ್ರೆಸ್ ಶಾಸಕರಿಂದ ಸಿದ್ದರಾಮಯ್ಯ ಗೆ ದೂರುಗಳ ಸುರಿಮಳೆ ಸುರಿದಿದ್ದು, ಉತ್ತರ ಕರ್ನಾಟಕ ಭಾಗದ ನಾಯಕರಿಂದ ಎಸ್.ಆರ್.ಪಾಟೀಲ್ ಗೆ ಸಭಾಪತಿ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಿಎಲ್ ಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಸಿದ್ಧರಾಮಯ್ಯ ಅವರಿಗೆ ನಾಯಕರಿಂದ ಒತ್ತಡ ಹೇರಲಾಗಿದೆ.
ಹಾಗೇ ಎಸ್.ಆರ್.ಪಾಟೀಲ್ ಗೆ ಸ್ಥಾನ ಕೈತಪ್ಪಿದ್ದಕ್ಕೆ ಸಿದ್ದರಾಮಯ್ಯ ಕೆಂಡಕಾರಿದ್ದಾರೆ. ಅಲ್ಲದೇ ಕೂಡಲೇ ವಾಪಾಸ್ ಬನ್ನಿ ಅಂತಾ ಆಪ್ತ ಶಾಸಕರು ಒತ್ತಡ ಹೇರಿದ ಹಿನ್ನಲೆಯಲ್ಲಿ ವಿದೇಶದಲ್ಲೇ ಇದ್ರೆ ಬೆಂಬಲಿಗರಲ್ಲಿ ಅತೃಪ್ತಿ ಹೆಚ್ಚುತ್ತೆ ಅಂತಾ ಮನಗೊಂಡ ಸಿದ್ಧರಾಮಯ್ಯ ಅವರು ವಿದೇಶದಿಂದ ದಿಢೀರ್ ವಾಪಾಸ್ ಬಂದಿರೋ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.