Publish Date: Thu, 13 Dec 2018 (15:21 IST)
Updated Date: Thu, 13 Dec 2018 (15:25 IST)
ಬಿಸಿಲೂರು ಖ್ಯಾತಿಯ ನಗರದಲ್ಲಿ ಒಂದೇ ದಿನದಲ್ಲಿ ಎರಡು ಕೊಲೆಗಳಾಗಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಲಬುರಗಿ ನಗರದ ರಂಗ ಮಂದಿರದ ಹತ್ತಿರದಲ್ಲಿ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. ಟೌನಹಾಲ್ ಮುಂಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರಿಬ್ಬರೂ ಅಂದಾಜು 40 ವರ್ಷದವರಾಗಿದ್ದಾರೆ. ರಂಗ ಮಂದಿರ ಬಳಿ ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣ ಕೊಲೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೆ, ಇನ್ನೊಬ್ಬನ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿವೆ.