Publish Date: Mon, 10 Dec 2018 (18:05 IST)
Updated Date: Mon, 10 Dec 2018 (18:07 IST)
ವಿಸಿ ನಾಲೆಗೆ ಬಸ್ ಉರುಳಿ 30 ಮಂದಿ ಜಲ ಸಮಾಧಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 15 ದಿನಗಳ ಬಳಿಕ ಬಸ್ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ.
ನ. 24ರಂದು ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಲೆಗೆ ಬಸ್ ಉರುಳಿ 30ಮಂದಿ ಜಲ ಸಮಾಧಿಯಾಗಿದ್ದರು. ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಹೊಳಲು ಶಿವಣ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾತ್ರಿ ಚಾಲಕನನ್ನು ಬೆಂಗಳೂರಿನಲ್ಲಿ ಬಂಧಿಸಿದ ಪಾಂಡವಪುರ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ.24ರಂದು ನಡೆದ ದುರ್ಘಟನೆ ಬಳಿಕ ಬಸ್ ಚಾಲಕ ಶಿವಣ್ಣ ಪರಾರಿಯಾಗಿದ್ದನು.