Select Your Language

Notifications

webdunia
webdunia
webdunia
webdunia

ಸೆಕ್ಸ್ ಗೆ ನಿರಾಕರಿಸಿದ ವಿವಾಹಿತ ವಿದ್ಯಾರ್ಥಿನಿಗೆ ಶಿಕ್ಷಕ ಮಾಡಿದ್ದೇನು ಗೊತ್ತಾ?

ಸೆಕ್ಸ್ ಗೆ ನಿರಾಕರಿಸಿದ ವಿವಾಹಿತ ವಿದ್ಯಾರ್ಥಿನಿಗೆ ಶಿಕ್ಷಕ ಮಾಡಿದ್ದೇನು ಗೊತ್ತಾ?
ಮುಂಬೈ , ಗುರುವಾರ, 13 ಡಿಸೆಂಬರ್ 2018 (09:15 IST)
ಮುಂಬೈ : ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಕಾಲೇಜ್ ಶಿಕ್ಷಕನೊಬ್ಬ  ವಿವಾಹಿತ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.


ವೈಶಾಲಿ ಮುಲಿಕ್ (21) ಕೊಲೆಯಾದ ವಿದ್ಯಾರ್ಥಿನಿ. ರಿಷಿಕೇಶ್ ಮೋಹನ್ ಕುಡಲ್ಕರ್ (27)ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಯಶ್ವಂತ್ರಾವ್ ಚವಾಣ್ ಮುಕ್ತ ವಿವಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು. ಮೃತ ವೈಶಾಲಿ ಮತ್ತು ಶಿಕ್ಷಕ ಒಂದೇ ಗ್ರಾಮದವರಾಗಿದ್ದು ಪರಸ್ಪರ ಇಬ್ಬರಿಗೂ ಪರಿಚಯ ವಿತ್ತು. ಇಬ್ಬರ ಮಧ್ಯೆ ಸಂಬಂಧ ಕೂಡ ಇತ್ತು ಎಂದು ವರದಿಯಾಗಿದೆ.


ಮೃತ ವೈಶಾಲಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಆರು ತಿಂಗಳ ಮಗು ಕೂಡ ಇತ್ತು. ತನ್ನ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸಿದ ವೈಶಾಲಿ ಸಾಂಗ್ಲಿಯಲ್ಲಿರುವ ಯಶ್ವಂತ್ರಾವ್ ಚವಾಣ್ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲಿ ಶಿಕ್ಷಕನಾಗಿದ್ದ ರಿಷಿಕೇಶ್ ಮೋಹನ್ ಕುಡಲ್ಕರ್ ವೈಶಾಲಿಗೆ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ವೈಶಾಲಿ ಒಪ್ಪದಿದ್ದಾಗ ಕೋಪಗೊಂಡ  ಶಿಕ್ಷಕ ಆಕೆಯನ್ನು ಕೊಲೆ ಮಾಡಿದ್ದಾನೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎನ್ನುವ ಫಲಿತಾಂಶ ಬಂದಿದ್ದ ಕಾರಣ  ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಕಾಲೇಜಿನ ಸಿಸಿಟಿವಿಯ ದೃಶ್ಯವನ್ನು ಪರಿಶೀಲಿಸಿ ಆರೋಪಿ ರಿಷಿಕೇಶ್ ಮೋಹನ್ ಕುಡಲ್ಕರ್ ಎಂಬುದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡ ಕಿಡ್ನಾಪರ್ಸ್ ನ್ನು ಪೊಲೀಸರು ಬಂಧಿಸಿದ್ದು ಹೇಗೆ ಗೊತ್ತಾ?