ಟ್ರೋಲಿಗರ ಬಾಯಿಗೆ ಆಹಾರವಾದ ಕೆ.ಜಿ.ಎ.ಫ್ ಚಿತ್ರದ 'ಸಲಾಂ ರಾಕಿ ಭಾಯ್' ಹಾಡು

ಗುರುವಾರ, 6 ಡಿಸೆಂಬರ್ 2018 (07:09 IST)
ಮುಂಬೈ : ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ಕೆ.ಜಿ.ಎ.ಫ್  ಚಿತ್ರದ ಮೊದಲ ಹಾಡೊಂದು ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.


ನಟ ಯಶ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಕೆ.ಜಿ.ಎ.ಫ್ ನ 'ಸಲಾಂ ರಾಕಿ ಭಾಯ್' ಹಾಡನ್ನು ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಯ್ತು. ಈ ಹಾಡಿಗೆ ಒಂದು ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ ಇನ್ನೊಂದು ಕಡೆಯಿಂದ ಆಕ್ರೋಶ ವ್ಯಕ್ತವಾಗಿದೆ.


ಇದಕ್ಕೆ ಕಾರಣವೆನೆಂದರೆ ಯಶ್ ಮೊದಲೇ ಕನ್ನಡದ ನಟ ಹಾಗೂ ಕನ್ನಡದ ಅಪ್ಪಟ ಅಭಿಮಾನಿ, ಇಂತಹ ನಟ ಕೆ.ಜಿ.ಎ.ಫ್ ಚಿತ್ರದ 'ಸಲಾಂ ರಾಕಿ ಭಾಯ್' ಹಾಡಿಗೆ ಹೆಜ್ಜೆ ಹಾಕಿದ್ದು ಕನ್ನಡಿಗರಿಗೆ ಇಷ್ಟವಾಗಲಿಲ್ಲ. 'ಸಲಾಂ ರಾಕಿ ಭಾಯಿ' ಲಿರಿಕಲ್ ಹಾಡು 75%ನಷ್ಟು ಹಿಂದಿಯಲ್ಲಿದೆ.. 158 ಶಬ್ಧಗಳಲ್ಲಿ 81 ಶಬ್ಧಗಳು ಹಿಂದಿಯಲ್ಲಿವೆ.


ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಯಾವಾಗ ಕನ್ನಡದಲ್ಲಿ ಹಾಡು ಬಿಡುಗಡೆ ಮಾಡುತ್ತೀರಾ?  ಎಂದು ಯಶ್ ಗೆ ಕೆಟ್ಟದಾಗಿ ಪದಬಳಕೆ ಮಾಡಿ ಕಾಮೆಂಟ್ ಮಾಡಿದ್ದಾರೆ. ಹಾಗೇ ಕನ್ನಡದಲ್ಲಿ ಹಿಂದಿ ಹಾಡು ತುರ್ಕಿದ್ದು, ಇನ್ನು ತಮಿಳಿನ ಲ್ಲಿ, ಹಿಂದಿ ಹಾಡು ಮಂಗಮಾಯ. ತಮಿಳಿನಲ್ಲಿರುವ ಪ್ರೀತಿ ಅಥವಾ, ಭಯ ಕನ್ನಡದಲ್ಲಿ ಯಾಕೆ ಇಲ್ಲಾ ನಿರ್ದೇಶಕ ಪ್ರಶಾಂತ್ ನೀಲ್? ಎಂದು ಟ್ರೋಲ್ ಮಾಡಿದ್ದಾರೆ. ಅಲ್ಲದೇ ಈ ಹಾಡಿಗೆ ಸಾಹಿತ್ಯ ಬರೆದ ನಾಗೇಂದ್ರ ಪ್ರಸಾದ್ ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಿಯಾಂಕ-ನಿಕ್​​ ​ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ