Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳು ತರಗತಿಯಲ್ಲಿ ಅತಿಯಾಗಿ ಮಾತನಾಡುತ್ತಾರೆ ಎಂದು ಶಿಕ್ಷಕಿ ಮಾಡಿದ್ದಾಳೆ ಇಂತಹ ನೀಚ ಕೆಲಸ

ವಿದ್ಯಾರ್ಥಿಗಳು ತರಗತಿಯಲ್ಲಿ ಅತಿಯಾಗಿ ಮಾತನಾಡುತ್ತಾರೆ ಎಂದು ಶಿಕ್ಷಕಿ ಮಾಡಿದ್ದಾಳೆ ಇಂತಹ ನೀಚ ಕೆಲಸ
ಗುರುಗ್ರಾಮ , ಭಾನುವಾರ, 9 ಡಿಸೆಂಬರ್ 2018 (07:25 IST)
ಗುರುಗ್ರಾಮ : ತರಗತಿಯಲ್ಲಿ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಾರೆ ಎಂದು ಅವರ  ಬಾಯಿಗೆ ಶಿಕ್ಷಕಿ ಟೇಪ್ ಸುತ್ತಿದ್ದ ಅಮಾನವೀಯ ಘಟನೆ ಗುರುಗ್ರಾಮದಲ್ಲಿ ನಡೆದಿದೆ.


ತರಗತಿಯಲ್ಲಿ ಸುಮಾರು 4ರಿಂದ 5 ವರ್ಷದ ವಿದ್ಯಾರ್ಥಿಗಳಿದ್ದು, ತರಗತಿಯ ವೇಳೆ ಕೆಲ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಿದ್ದಾರೆ ಎಂದು ಶಿಕ್ಷಕಿಯೊಬ್ಬಳು ಟೇಪ್ ತೆಗೆದುಕೊಂಡು ಮಕ್ಕಳ ಬಾಯಿಗೆ ಹಚ್ಚಿದ್ದಾಳೆ.


ಈ ದೃಶ್ಯವು ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಪೋಷಕರು ಶಿಕ್ಷಕಿ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದ ಶಾಲಾ ಆಡಳಿತ ಮಂಡಳಿ ಇದೀಗ ಶಿಕ್ಷಕಿಯನ್ನು ಕೆಲಸದಿಂದ ಅಮಾನತು ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವೈದ್ಯ ಮಾಡುತ್ತಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ