Select Your Language

Notifications

webdunia
webdunia
webdunia
webdunia

ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವೈದ್ಯ ಮಾಡುತ್ತಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವೈದ್ಯ ಮಾಡುತ್ತಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
ನವದೆಹಲಿ , ಭಾನುವಾರ, 9 ಡಿಸೆಂಬರ್ 2018 (07:01 IST)
ನವದೆಹಲಿ : ವೈದ್ಯನೊಬ್ಬ ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವಿದ್ಯುತ್ ಶಾಕ್ ಟ್ರೀಟ್ಮೆಂಟ್ ನೀಡುತ್ತಿದ್ದ ಪ್ರಕರಣವೊಂದು ನವದೆಹಲಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಡಾ.ಕೆ.ಪಿ.ಗುಪ್ತಾ ಎಂಬುವವರು ಇಂತಹ ಕೆಲಸ ಮಾಡುತ್ತಿದ್ದ ವೈದ್ಯರಾಗಿದ್ದು, ಇವರು ಸಲಿಂಗಕಾಮವನ್ನು ವಂಶವಾಹಿ ಮಾನಸಿಕ ಸಮಸ್ಯೆ ಎಂದು  ಪರಿಗಣಿಸಿ ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ 2016 ರಿಂದಲೂ ವಿದ್ಯುತ್ ಶಾಕ್ ಟ್ರೀಟ್ಮೆಂಟ್ ನೀಡುತ್ತಿದ್ದರು. ಈ ಚಿಕಿತ್ಸೆಯನ್ನು ಶಾಸನಬದ್ಧವಾಗಿ ಹಾಗೂ ವೈದ್ಯಶಾಸ್ತ್ರದಲ್ಲಿ ಅನುಮೋದಿಸಲಾಗಿಲ್ಲ. ಈ ಹಿನ್ನಲೆಯಲ್ಲಿ ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆ ಆರೋಪದ ಮೇಲೆ ಡಾ.ಕೆ.ಪಿ.ಗುಪ್ತಾ ಮೆಡಿಕಲ್‌ ಕೌನ್ಸಿಲ್‌ನಿಂದ ಅಮಾನತುಗೊಳಿಸಲಾಗಿದೆ.


ಆದರೆ ಅವರನ್ನು ಅಮಾನತುಗೊಳಿಸಿದ ಬಳಿಕವೂ ಅವರು ನಿಯಮಬಾಹಿರ ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಕಾರಣದಿಂದ ಮೆಡಿಕಲ್‌ ಕೌನ್ಸಿಲ್‌ ಕೋರ್ಟ್‌ಗೆ ದೂರು ನೀಡಿದೆ. ಈ ಹಿನ್ನಲೆಯಲ್ಲಿ ದಿಲ್ಲಿ ಕೋರ್ಟ್‌ ವೈದ್ಯ ಗುಪ್ತಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಭಾರತೀಯ ವೈದ್ಯಕೀಯ ಕೌನ್ಸಿಲ್‌ ಕಾಯಿದೆ ಉಲ್ಲಂಘನೆಗಾಗಿ ಆರೋಪಿ ವೈದ್ಯನಿಗೆ ಗರಿಷ್ಠ ಒಂದು ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೊರಕೆಯಿಂದ ಹೆತ್ತಮ್ಮನಿಗೆ ಹೊಡೆದ ಮಗನ ಮೇಲೆ ಎಫ್ ಐ ಆರ್