Select Your Language

Notifications

webdunia
webdunia
webdunia
Saturday, 26 April 2025
webdunia

ನೌಕರರ ಸಂಘದಿಂದ ಸುವರ್ಣ ಸೌಧ ಚಲೋ

ನಿಶ್ಚಿತ ಪಿಂಚಣಿ
ದಾವಣಗೆರೆ , ಸೋಮವಾರ, 10 ಡಿಸೆಂಬರ್ 2018 (17:07 IST)
ಎನ್ಪಿಎಸ್ ಸೌಲಭ್ಯ ಬದಲಾಗಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮುಂದುವರೆಸಬೇಕು ಎಂದು 
ಸುವರ್ಣಸೌಧ ಚಲೋ ರ್ಯಾಲಿ  ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾಕಾಲೇಜುಗಳ ನೌಕರರ ಸಂಘ ನಿರ್ಧರಿಸಿದೆ.

ಬಸವರಾಜ ಹೊರಟ್ಟಿ ಸಮಿತಿಯ ಕಾಲ್ಪನಿಕ ವೇತನ ಜಾರಿಗೆ ಮಾಡಬೇಕು. ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಡಿ. 13 ರಂದು ಬೆಳಗಾವಿಯ ಸುವರ್ಣ ಸೌಧ  ಎದುರು ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ.

ಇನ್ನೂ ಡಿ. 14 ರಿಂದ ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧತೆ ನಡೆಸಲಾಗಿದೆ. ದಾವಣಗೆರೆ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳ ಅನುದಾನಿತ ಶಿಕ್ಷಕರು ಈ ಪ್ರತಿಭಟನೆಗೆ ಕೈ ಜೋಡಿಸಬೇಕು. ಶಿಕ್ಷಕರ ಕುಟುಂಬ ಸಮೇತ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ಕೈಗೊಂಡಿವುರುದಾಗಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಮಾಹಿತಿ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿಯಿಂದ ಉಚ್ಛಾಟಿಸಲು ಆಗ್ರಹ