Publish Date: Wed, 05 Dec 2018 (14:22 IST)
Updated Date: Wed, 05 Dec 2018 (14:26 IST)
ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಬೆಳಗಾವಿ ಅಧಿವೇಶನದ ನಂತರ ಉರುಳುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು,’ ಅಧಿವೇಶನ ನಡೆಯುವ ವೇಳೆ ಸರ್ಕಾರ ಪತನವಾಗುತ್ತದೆ. ಶಾಸಕರ ಒಂದು ತಂಡ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ. ಸರ್ಕಾರ ಅಲುಗಾಡುತ್ತಿದೆ ಎನ್ನುವುದು ಸತ್ಯ. ಅದರಲ್ಲಿ ಅನುಮಾನವೇ ಇಲ್ಲ. ಮುಂದೇನಾಗಲಿದೆ ಎಂಬುದನ್ನು ಅಧಿವೇಶನದವರೆಗೆ ಕಾದು ನೋಡಿ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆಯಿಲ್ಲ. ಒಬ್ಬರು ಒಂದು ಮಾತನಾಡಿದರೆ, ಇನ್ನೊಬ್ಬರು ಇನ್ನೇನೋ ಹೇಳುತ್ತಾರೆ, 25 ಕೋಟಿ ರೂ. ಕೊಟ್ಟು ಅಪರೇಷನ್ ಕಮಲ ಮಾಡುವ ಶಕ್ತಿ ಬಿಜೆಪಿಗೆ ಇಲ್ಲ. ಈಗ ಕಾಲಕೂಡಿ ಬಂದಿದೆ. ಶೀಘ್ರದಲ್ಲೇ ಸರ್ಕಾರ ತಾನಾಗೇ ಬೀಳಲಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.