Select Your Language

Notifications

webdunia
webdunia
webdunia
webdunia

ಲೇಡಿ ಕಂಡಕ್ಟರ್ ಗೆ ಆತ ಸದ್ದಿಲ್ಲದೇ ಮಾಡಿದ್ದೇನು?

ಲೇಡಿ ಕಂಡಕ್ಟರ್ ಗೆ ಆತ ಸದ್ದಿಲ್ಲದೇ ಮಾಡಿದ್ದೇನು?
ಆನೇಕಲ್ , ಸೋಮವಾರ, 5 ಆಗಸ್ಟ್ 2019 (18:13 IST)
ಲೇಡಿ ಕಂಡಕ್ಟರ್ ಒಬ್ಬರಿಗೆ ಮಾಡಬಾರದ ಕೆಲಸ ಮಾಡಿದವನಿಗೆ ಸಖತ್ ಶಿಕ್ಷೆ ಆಗಿದೆ.   

ಕೆ ಎಸ್ ಆರ್ ಟಿ ಸಿ ಬಸ್‌ ನ ಲೇಡಿ ಕಂಡಕ್ಟರ್ ನ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ಧವಾಗಿದ್ದ ಕೆಎಸ್ಆರ್ ಟಿಸಿ ಎಕ್ಸ್‌ಪ್ರೆಸ್‌ ಬಸ್ ನ ಲೇಡಿ ಕಂಡಕ್ಟರ್ ಬಸ್ ನಿಲ್ದಾಣದ ಕಚೇರಿಗೆ ಹೋಗಿ ಎಂಟ್ರಿ ಮಾಡಿಸಿಕೊಳ್ಳಲು ಹೋಗಿದ್ರು.

ಈ ಸಂದರ್ಭದಲ್ಲಿ ಬಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಗಮನಿಸಿದ ಖದೀಮನೊಬ್ಬ ಬ್ಯಾಗ್ ಕದ್ದು ಎಸ್ಕೇಪ್ ಆಗುವಾಗ ಲೇಡಿ ಕಂಡಕ್ಟರ್ ಗಮನಿಸಿ ಅವನನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಆಗ ಹಿಗ್ಗಾಮುಗ್ಗಾ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾರೆ. ಇನ್ನು ಬ್ಯಾಗ್ ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದವು.  




Share this Story:

Follow Webdunia kannada

ಮುಂದಿನ ಸುದ್ದಿ

370 ರದ್ದು: ಕಾಂಗ್ರೆಸ್ ಕಳಂಕ ಹೊರಟೋಯ್ತು ಎಂದ ಮುತಾಲಿಕ್