Publish Date: Mon, 05 Aug 2019 (17:51 IST)
Updated Date: Mon, 05 Aug 2019 (17:53 IST)
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370 ಅನುಚ್ಛೇದ ಕ್ಯಾನ್ಸಲ್ ಮಾಡಿರೋದ್ರಿಂದ ಕಾಂಗ್ರೆಸ್ ಮಾಡಿಟ್ಟಿದ್ದ ಕಳಂಕ ದೂರಾಗಿದೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಹೇಳಿದ್ದಾರೆ.
ಕೈ ಪಾಳೆಯದ ವಿರುದ್ಧ ಹರಿಹಾಯ್ದ ಅವರು, ಏಳು ದಶಕಗಳಿಂದ ದೇಶಕ್ಕೆ ಕಳಂಕದ ರೀತಿಯಲ್ಲಿ ಕಾಂಗ್ರೆಸ್ ಬೆಳೆಸಿಕೊಂಡು ಬಂದಿತ್ತು.
ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ಕೆಲಸ ಸರಿ ಮಾಡೋಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕೇಂದ್ರ ಸರಕಾರದ ನೂತನ ನಿರ್ಧಾರವನ್ನ ಸ್ವಾಗತ ಮಾಡೋದಾಗಿ ಪ್ರಮೋದ್ ಮುತಾಲಿಕ್ ಹೇಳಿದ್ರು.
ಸೈನಿಕರ ಮೇಲೆ ದಬ್ಬಾಳಿಕೆ, ಹಿಂದುಗಳ ಮೇಲೆ ಆಕ್ರಮಣ ಮಾಡ್ತಿದ್ದವರಿಗೆ ಖಡಕ್ ಉತ್ತರ ಕೊಡಲಾಗಿದೆ ಅಂತ ಹೇಳಿದ್ದಾರೆ.