Publish Date: Mon, 05 Aug 2019 (17:42 IST)
Updated Date: Mon, 05 Aug 2019 (17:44 IST)
ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಭಾರೀ ಮಳೆಯ ಪರಿಣಾಮ ರಾಜ್ಯದ ಗಡಿ ಜಿಲ್ಲೆಗಳ ಮೇಲೂ ಆಗುತ್ತಿದೆ. ಗಡಿ ಜಿಲ್ಲೆಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಭಾರಿ ಅನಾಹುತವೊಂದು ನಡೆದಿದೆ.
ಬೆಳಗಾವಿಯಲ್ಲಿರೋ ಸಾಂಬ್ರಾ ವಿಮಾನ ನಿಲ್ದಾಣದ ಹತ್ತಿರದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಭೂಮಿ ಕುಸಿದಿದೆ.
ಕುಸಿದಿರೋ ನೆಲದಲ್ಲಿಯೇ ಮಳೆ ನೀರು ಧಾರಾಕಾರವಾಗಿ ಹರಿಯುತ್ತಿದೆ.
ಸಹಜವಾಗಿಯೇ ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಈ ಪ್ರದೇಶದಲ್ಲಿರೋ ಜನರು ಭಯದಲ್ಲಿದ್ದಾರೆ.