Publish Date: Sat, 18 Jan 2020 (18:38 IST)
Updated Date: Sat, 18 Jan 2020 (18:39 IST)
ಸಿಎಎ, ಎನ್.ಪಿ.ಆರ್, ಎನ್.ಆರ್.ಸಿ ವಿರುದ್ಧ ಕಾಂಗ್ರೆಸ್ ಶಾಸಕಿಯಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ.
ಕಲಬುರಗಿ ನಗರದ ಜಗತ್ ವೃತ್ತದ ಹತ್ತಿರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಆವರಣದಲ್ಲಿ ಸಿಎಎ, ಎನ್.ಪಿ.ಆರ್ ಹಾಗೂ ಎನ್.ಆರ್.ಸಿ ವಿರುದ್ಧ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲಾಯಿತು.
ಶಾಸಕಿ ಫಾತೀಮಾ ಮಾತನಾಡಿ, ಸಿಎಎ ಧರ್ಮ ಆಧಾರಿತ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಕಾನೂನನ್ನು ಸಂವಿಧಾನ ಗೌರವಿಸುವರೆಲ್ಲರೂ ವಿರೋಧಿಸಬೇಕೆಂದರು.
ಅಷ್ಟೇ ಅಲ್ಲೇ ಏಪ್ರಿಲ್ ತಿಂಗಳಲ್ಲಿ ಎನ್.ಪಿ.ಆರ್ ನಡೆಸಲಾಗುತ್ತಿದ್ದು, ಇದರಲ್ಲಿ ಕೆಲವು ಪ್ರಶ್ನೆಗಳು ನೇರವಾಗಿ ಎನ್.ಆರ್.ಸಿಗೆ ಸಹಾಯ ಮಾಡುವಂತಹದಾಗಿದ್ದು, ಎನ್.ಪಿ.ಆರ್ ನೇರವಾಗಿ ಎನ್. ಆರ್. ಸಿ ಮಾಡಲಾಗುತ್ತಿದೆ ಎಂದಿದ್ದಾರೆ.