‘ಶ್ರೀರಾಮುಲು ಮಂಗ, ಅವನಿಗೇನೂ ಗೊತ್ತಿಲ್ಲ’

ಶನಿವಾರ, 18 ಜನವರಿ 2020 (18:27 IST)
ಸಚಿವ ಬಿ.ಶ್ರೀರಾಮುಲು ಮಂಗ, ಅವನಿಗೆ ಏನೂ ಗೊತ್ತಿಲ್ಲ. ರಾಮುಲು ದೊಡ್ಡ ದೊಣ್ಣೆನಾಯಕನಲ್ಲ.

ಹೀಗಂತ ಶಾಸಕ ಹಾಲಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದಾರೆ.

ಕೆಎಫ್ ಡಿ- ಮಂಗನಕಾಯಿಲೆ ವಿರುದ್ಧ ಜನಜಾಗೃತಿ ಮೂಡಿಸಿ, ಮೈತ್ರಿ ಸರಕಾರದ ವಿರುದ್ಧ ಹೋರಾಡಿ ಮೈತ್ರಿ ಸರಕಾರದಲ್ಲಿ ಸಾಗರಕ್ಕೆ ವೈರಾಣು ಪತ್ತೆಯ ಪ್ರಯೋಗಾಲಯ ಮಂಜೂರು ಮಾಡಿಸಿಕೊಂಡಿದ್ದರು ಶಾಸಕ ಹಾಲಪ್ಪ.

ಆದರೆ, ವೈರಾಣು ಪತ್ತೆಗೆ ಉದ್ದೇಶಿಸಿದ್ದ ಪ್ರಯೋಗಾಲಯವನ್ನು ಶ್ರೀರಾಮುಲು ಮೇಲೆ ಒತ್ತಡ ಹಾಕೋ ಮೂಲಕ ಕೆ.ಎಸ್.ಈಶ್ವರಪ್ಪ ಅದನ್ನು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ.

ಶಾಸಕ ಹಾಲಪ್ಪಗೆ ತಿಳಿಸದೇ ಆರೋಗ್ಯ ಇಲಾಖೆಯು ಪ್ರಯೋಗಾಲಯವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಿದ್ದಕ್ಕೆ ರಾಮುಲು ವಿರುದ್ಧ ಹಾಲಪ್ಪ ಕಿಡಿಕಾರಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಂಚಮಸಾಲಿ ಪೀಠದ ಸ್ವಾಮೀಜಿಗೆ ಹುಷಾರ್ ಎಂದ ಬಸನಗೌಡ ಪಾಟೀಲ್ ಯತ್ನಾಳ್