Select Your Language

Notifications

webdunia
webdunia
webdunia
webdunia

ಮನೆ ಮುಂದೆ ಮಕ್ಕಳು ಆಡೋವಾಗ ಅಂಥದ್ದೇನಾಯ್ತು?

ಮನೆ ಮುಂದೆ ಮಕ್ಕಳು ಆಡೋವಾಗ ಅಂಥದ್ದೇನಾಯ್ತು?
ಕುಂದಾಪುರ , ಶುಕ್ರವಾರ, 21 ಜೂನ್ 2019 (16:44 IST)
ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಬೀದಿನಾಯಿಗಳ ದಾಳಿಗೆ ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬಳು ಗಾಯಗೊಂಡ ಘಟನೆ ನಡೆದಿದೆ. ಕಂಡ್ಲೂರು ಹೊಳೆ ಬದಿ ನಿವಾಸಿಯಾಗಿರುವ ಅದ್ವಿತ್ (4), ಆಯೇಷಾ (3) ಹಾಗೂ ಕನಕ (44) ಬೀದಿನಾಯಿಗಳ ದಾಳಿಯಿಂದ ಗಾಯಗೊಂಡವರಾಗಿದ್ದಾರೆ.

 ಕಂಡ್ಲೂರು ಸೇತುವೆ ಹತ್ತಿರದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ದಾಳಿ ನಡೆಸಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ.

ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಮಕ್ಕಳನ್ನು ಬಿಡಿಸಲು ಬಂದ ಕನಕಾ ಳ ಮೇಲೆಯೂ ಕೈ ಕಚ್ಚಿ ಎಳೆದಾಡಿವೆ.
ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ