Select Your Language

Notifications

webdunia
webdunia
webdunia
webdunia

ಮನೆಯಲ್ಲಿಯಲ್ಲಿಯೇ ಪ್ರೋಟಿನ್ ಪೌಡರ್ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲಿಯಲ್ಲಿಯೇ ಪ್ರೋಟಿನ್ ಪೌಡರ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 14 ಜೂನ್ 2019 (05:51 IST)
ಬೆಂಗಳೂರು : ಪ್ರೋಟಿನ್ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗುವ ಅಂಶ. ಇದರಿಂದ ದೇಹವು ಆರೋಗ್ಯವಾಗಿರುತ್ತದೆ. ಈ ಪ್ರೋಟಿನ ಪೌಡರ್ ಗಳನ್ನು ಹೊರಗಡೆಯಿಂದ ತಂದು ಆರೋಗ್ಯ ಹಾಳುಮಾಡಿಕೊಳ್ಳವ ಬದಲು ಅದನ್ನು ಮನೆಯಲ್ಲಿಯೇ ಈ ರೀತಿಯಾಗಿ ತಯಾರಿಸಿ.




ರಾಗಿ 500ಗ್ರಾಂ, ಗೋದಿ 250ಗ್ರಾಂ, ಕಡಲೆಕಾಳು250ಗ್ರಾಂ, ಹೆಸರುಕಾಳು 250 ಗ್ರಾಂ, ಬಾದಾಮಿ 200 ಗ್ರಾಂ, ಸೋಯಾಬೀನ್ 150ಗ್ರಾಂ, ಬಾರ್ಲಿ 100ಗ್ರಾಂ.  ಮೊದಲು ರಾಗಿ, ಬಾರ್ಲಿ, ಗೋದಿ, ಕಡಲೆಕಾಳು, ಹೆಸರುಕಾಳು, ಸೋಯಾಬೀನ್ ಹುರಿದುಕೊಳ್ಳಿ. ನಂತರ ಬಾದಾಮಿಯನ್ನು ಹುರಿಯದೆ, ಹುರಿದ ಕಾಳುಗಳ ಜೊತೆ ಮಿಶ್ರಣ ಮಾಡಿಕೊಳ್ಳಿ. ನಂತರ ಎಲ್ಲವನ್ನು ಹಿಟ್ಟು ಮಾಡಿಕೊಳ್ಳಿ.


ನಂತರ  1 ಗ್ಲಾಸ್ ನೀರನ್ನು ಕುದಿಸಿ 2 ಟೇಬಲ್ ಸ್ಪೂನ್ ನಷ್ಟು ಈ ಪ್ರೋಟಿನ್ ಪೌಡರನ್ನು ಹಾಕಿ 2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಸೇವಿಸಿ. ಇದನ್ನು 1 ವರ್ಷ ಮೇಲ್ಪಟ್ಟ ಮಕ್ಕಳು, ವಯಸ್ಕರು ಹಾಗೂ ವೃದ್ಧರು ಸೇವಿಸಬಹುದು.



 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಲ್ಲದಾಗ ಆತ ಮೆಲ್ಲಗೆ ಆಕೆಗೆ ಮಾಡುತ್ತಿದ್ದಾನೆ