Publish Date: Mon, 29 Apr 2019 (12:59 IST)
Updated Date: Mon, 29 Apr 2019 (13:01 IST)
ಸಿಎಂ ಆಗುವ ಉಮೇದಿನಲ್ಲಿ ಬಿ.ಎಸ್.ಯಡಿಯೂರಪ್ಪ ಏನೇನೋ ಮಾತಾಡ್ತಾರೆ. ಅವರು ಹುಚ್ಚು ಮಾತುಗಳನ್ನು ಆಡುತ್ತಿದ್ದಾರೆ. ಈ ಜನ್ಮದಲ್ಲಿ ಯಡಿಯೂರಪ್ಪ ಸಿಎಂ ಆಗೋದಿಲ್ಲ. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಸಂಸದ ಹಾಗೂ ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಟಾಂಗ್ ನೀಡಿರುವ ಮೊಯ್ಲಿ, ಕೋಲಾರ, ಚಿಕ್ಕಬಳ್ಳಾಪುರ, ಕಲ್ಬುರ್ಗಿ, ತುಮಕೂರಿನಲ್ಲಿ ಮೈತ್ರಿ ಸೋಲುತ್ತದೆ. ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲು ಖಚಿತ ಎಂದು ಯಡಿಯೂರಪ್ಪ ಹೇಳಿರುವುದಕ್ಕೆ ಕೆಂಡಾಮಂಡಲರಾಗಿದ್ದರೆ.
ಯಡಿಯೂರಪ್ಪನಿಗೆ ತಲೆ ಕೆಟ್ಟಿದೆ. ಮೊದಲು ತಲೆಗೆ ಸ್ನಾನ ಮಾಡಲಿ. ಯಡ್ಡಿ ಈ ಜನ್ಮದಲ್ಲಿ ಮತ್ತೊಮ್ಮೆ ಸಿಎಂ ಆಗಲ್ಲ. ಅವರ ಮಾತಿನಿಂದ ಯಾರೂ ಗಾಬರಿಯಾಗಬೇಕಿಲ್ಲ. ನೂರಕ್ಕೆ ನೂರರಷ್ಟು ನಾನು ಗೆಲ್ಲುವುದು ಖಚಿತ ಎಂದಿದ್ದಾರೆ.