ತ್ರಿವಳಿ ಕೊಲೆ; ರಕ್ತದೋಕುಳಿ ನಡೆದದ್ದೆಲ್ಲಿ?

ಬುಧವಾರ, 12 ಜೂನ್ 2019 (20:15 IST)
ದಾಯಾದಿಗಳ ಕಲಹ ತ್ರಿವಳಿ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಮೇದಕ್ ಗ್ರಾಮದ ಹೊಲವೊಂದರಲ್ಲಿ  ಮೂರು ಜನರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮತ್ತೊಬ್ಬ ಮಗ ಸೇಡಂನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮಲ್ಕಪ್ಪ ಚಿನ್ನಯ್ಯ(60), ಶಂಕ್ರಪ್ಪ (25), ಚಿನ್ನಪ್ಪ (27) ಕೊಲೆಯಾದವರು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಜಮೀನು ವಿವಾದ ಹಿನ್ನೆಲೆಯಲ್ಲಿ ನಡೆದ ದಾಯಾದಿಗಳ ಕಲಹವೇ ಈ ಕೊಲೆಗಳಿಗೆ ಕಾರಣ ಎನ್ನಲಾಗುತ್ತಿದೆ.

ದಾಯಾದಿಗಳಾದ ಆಶಪ್ಪ ಚಿನ್ನಯ್ಯ, ರಾಮಪ್ಪ ಚಿನ್ನಯ್ಯ, ಚಿನ್ನಪ್ಪ ಚಿನ್ನಯ್ಯ, ಲಾಲಪ್ಪ ಚಿನ್ನಯ್ಯ, ಹನಮಂತ ಆಳಪ್ಪ, ಶರಣಪ್ಪ ಚನ್ನಪ್ಪ, ಬಸಪ್ಪ ಚನ್ನಪ್ಪ, ಸೀನು ರಾಮಪ್ಪ ಸೇರಿದಂತೆ ಒಟ್ಟು 8 ಜನರು  ಕೂಡಿಕೊಂಡು ಮೂವರ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕದ್ದು ಹೇಗೆ ಗೊತ್ತಾ? ಶಾಕಿಂಗ್