Publish Date: Mon, 27 May 2019 (17:27 IST)
Updated Date: Mon, 27 May 2019 (17:29 IST)
ನಾವು ಆರೋಗ್ಯವಾಗಿದ್ದೇವೆ, ನಮಗೇಕೆ ಆಪರೇಷನ್ ಮಾಡ್ತಾರೆ ಬಿಜೆಪಿಯವರು ಅಂತ ಸಚಿವರೊಬ್ಬರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ವಿಚಾರ ಕುರಿತು ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಅವರಿಗೆ ಈಗ ಹೊಸ ಹುರುಪು ಬಂದಿದೆ. ಅವರು ಆಪರೇಷನ್ ಪ್ರಯತ್ನ ಮಾಡ್ತಿದ್ದಾರೆ. ಒಂದು ವರ್ಷದಿಂದಲೂ ಅದನ್ನೇ ಮಾಡುತ್ತಲೇ ಇದ್ದಾರೆ. ಆದರೂ ರಾಜ್ಯದ ಮೈತ್ರಿ ಸರ್ಕಾರ ಮುಂದುವರಿಯಲಿದೆ.
ನಾವು ಆರೋಗ್ಯವಾಗಿದ್ದೇವೆ, ನಮಗೇಕೆ ಆಪರೇಷನ್ ಮಾಡ್ತಾರೆ? ಅವರ ಆಪರೇಷನ್ ಏನೂ ಆಗಲ್ಲ ಅಂತ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.