Publish Date: Sat, 25 Feb 2023 (14:48 IST)
Updated Date: Sat, 25 Feb 2023 (14:52 IST)
ಸದಾ ಒಂದಲ್ಲ ಒಂದು ಚಳುವಳಿಗೆ ಹೆಸರುವಾಸಿಯಾದ ವಾಟಾಳ್ ನಾಗರಾಜ್ ಕನ್ನಡ ಉಳಿಸಿ ಕನ್ನಡ ಬೆಳಿಸಿ ಎಂದು ಒತ್ತಾಯಿಸಿ ಭಾನುವರು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ಮಾಡಲಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕನ್ನಡಿಗ ರಾಜಕಾರಣಿ ನಾಡು ನುಡಿ ಜಲ ಭಾಷೆ ಗಡಿ ವಿಚಾರದಲ್ಲಿ ಗಟ್ಟಿಯಾದ ಧ್ವನಿಯಿಂದ ಗರ್ಜಿಸುವಂತಹ ಒಬ್ಬ ನಾಯಕ ಗೆದ್ದು ಬರಬೇಕು. ಇಲ್ಲಿ ಪರಭಾಷಿಕರ ದಬ್ಬಾಳಿಕೆ ಮಿತಿಮೀರಿದೆ .ಹೀಗಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಧರಣಿ ನಡೆಸಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.