Select Your Language

Notifications

webdunia
webdunia
webdunia
webdunia

ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ!

ಅರೆಸ್ಟ್
ಫ್ಲೋರಿಡಾ : ಶಾಲೆಗೆ ತಂದಿದ್ದ ವೀಡಿಯೋಗೇಮ್ನ್ನು ಕಸಿದುಕೊಂಡಿದ್ದಕ್ಕಾಗಿ 17 ವರ್ಷದ ಹುಡುಗನೊಬ್ಬ ಶಾಲೆಯ ಶಿಕ್ಷಕರೊಬ್ಬರ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಫ್ಲೋರಿಡಾದ ಮತಾನ್ಜಾಸ್ನಲ್ಲಿ ನಡೆದಿದೆ.

ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿ ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಫ್ಲಾಗರ್ ಕೌಂಟಿ ಶೆರಿಫ್ ಕಛೇರಿಯು ಬಿಡುಗಡೆ ಮಾಡಿದೆ. ಅದರಲ್ಲಿ ವಿದ್ಯಾರ್ಥಿಯು ಸಹಾಯಕಿಯನ್ನು ನೆಲಕ್ಕೆ ತಳ್ಳಿ ಒದೆಯುವುದು ಮತ್ತು ಗುದ್ದುತ್ತಿರುವುದು ಸೆರೆಯಾಗಿದೆ. 

ಶಿಕ್ಷಕ ಹಾಗೂ ಜನರು ಆತನನ್ನು ತಡೆಯುವ ತನಕ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾಗಿದ್ದ ಸಹಾಯಕಿ ಸುಧಾರಿಸಿಕೊಳ್ಳಲು ಹಲವು ನಿಮಿಷಗಳನ್ನು ತೆಗೆದುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ : ಬೆಷರತ್