Publish Date: Thu, 16 Feb 2023 (15:32 IST)
Updated Date: Thu, 16 Feb 2023 (15:39 IST)
ಟಿಪ್ಪು ರೀತಿ ಸಿದ್ದರಾಮಯ್ಯರನ್ನ ಹೊಡೆದಾಕಿಎಂಬ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಅಶ್ವಥ್ ನಾರಾಯಣ್ರನ್ನು ಕೂಡಲೇ ಅರೆಸ್ಟ್ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಹೇಳಿಕೆ ನೀಡಿದ್ದಾರೆ. ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ದತೆ ತೋರಸುತ್ತದೆ ನಾಚಿಕೆಯಾಗಬೇಕು ಅವರಿಗೆ ಎಂದು ಸಲೀಂ ಅಹಮ್ಮದ್ ವಾಗ್ದಾಳಿ ನಡೆಸಿದರು. BJP ಹೊಡಿ ಬಡಿ ಸರ್ಕಾರವಾಗಿದದು, ಈ ಸರ್ಕಾರದ ಆಯಸ್ಸು ಕೇವಲ 60 ದಿನಗಳು ಮಾತ್ರ. ಹೀಗಾಗಿ ಅವರು ಈ ರೀತಿ ಹುಚ್ಚಾಗಿ ಮಾತಾಡ್ತಾರೆ.ಸಿ.ಟಿ.ರವಿ ಹಾಗೂ ಅಶ್ವಥ್ ನಾರಾಯಣ ಅವರದು ಎಲುಬಿಲ್ಲದ ನಾಲಿಗೆ, ಬಾಯಿಗೆ ಬಂದಂತೆ ಮಾತಾಡ್ತಾರೆ. ರೈತರಿಗೆ ಪರಿಹಾರ ಕೊಡೋ ಯೋಗ್ಯತೆ ಇಲ್ಲ. ಟಿಪ್ಪು, ಸಾವರ್ಕರ್ ಬಗ್ಗೆ ಮಾತಾಡಿ, ಸಮಾಜ ಒಡೆಯೋ ಕೆಲಸ ಮಾಡ್ತೀದ್ದಾರೆ. ಮೋದಿ ನೂರ ಸಲ ರಾಜ್ಯಕ್ಕೆ ಬಂದರು ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ. ಇದು ಬಿಜೆಪಿ ಪಕ್ಷ ಅಲ್ಲ, ಭ್ರಷ್ಟಾಚಾರ ಜನತಾ ಪಾರ್ಟಿ, ಬ್ರೋಕರ್ ಜನತಾ ಪಾರ್ಟಿ ಆಗಿದ್ದು, ಇವರು ಏನೇ ಮಾಡಲಿ ಈ ಬಾರಿ ರಾಜ್ಯದಲ್ಲಿ ನಾವು 150 ಸೀಟ್ ಗೆಲ್ತೀವಿ, ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಹೇಳಿಕೆ ನೀಡದರು.