Select Your Language

Notifications

webdunia
webdunia
webdunia
webdunia

ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ : ಬೆಷರತ್

ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ : ಬೆಷರತ್
ದಿಸ್ಪುರ್ , ಶನಿವಾರ, 25 ಫೆಬ್ರವರಿ 2023 (13:57 IST)
ದಿಸ್ಪುರ್ : ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರ ಬಂಧನ ಹಾಗೂ ಬಿಡುಗಡೆಯ ಬಳಿಕ ಅವರು ನೀಡಿದ್ದ ಹೇಳಿಕೆಗೆ ಬೆಷರತ್ ಕ್ಷಮೆ ಯಾಚಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾರು ಗೌರವಕ್ಕೆ ಧಕ್ಕೆ ಬರುವಂತಹ ಯಾವ ಪದಗಳನ್ನು ಬಳಸುವದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ರಾಯ್ಪುರದ ಕಾಂಗ್ರೆಸ್ ಮಾಹಾಧಿವೇಶನಕ್ಕೆ ತೆರಳಲು ವಿಮಾನವೇರಿದ್ದ ಪವನ್ ಖೇರಾ ಅವರನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದರು.

ಖೇರಾ ಅವರ ವಿರುದ್ಧ ಕ್ರಿಮಿನಲ್ ಸಂಚು, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕೋಮು ಸೌಹಾರ್ದತೆಗೆ ಪ್ರಚೋದಿಸಿದ ಆರೋಪ ದಾಖಲಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಐಜಿಪಿ ಮತ್ತು ವಕ್ತಾರ ಪ್ರಶಾಂತ ಕುಮಾರ್ ಭುಯಾನ್ ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೌತಮ್ ಅದಾನಿಗೆ 12 ಲಕ್ಷ ಕೋಟಿ ನಷ್ಟ!