ದಿಸ್ಪುರ್ : ಮದರಸಾಗಳು ತಮ್ಮ ಹಣಕಾಸಿನ ಮೂಲಗಳನ್ನು ಬಹಿರಂಗಪಡಿಸುವಂತೆ ಅಸ್ಸಾಂ ಪೊಲೀಸರು ಇಂದು ಸೂಚಿಸಿದ್ದಾರೆ.
									
			
			 
 			
 
 			
					
			        							
								
																	ರಾಜ್ಯದಲ್ಲಿ ಜಿಹಾದಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವ ಭಾಗವಾಗಿ ಈ ನಿರ್ದೇಶನ ನೀಡಲಾಗಿದೆ. ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಶೀಘ್ರದಲ್ಲೇ ಆನ್ಲೈನ್ ಪೋರ್ಟಲ್ ತೆರೆಯಲಾಗುತ್ತಿದೆ.
									
										
								
																	ಈ ಪೂರ್ಟಲ್ನಲ್ಲೇ ಹಣಕಾಸಿನ ಮೂಲ ಹಾಗೂ ಮದರಸಾದ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಮೂರು ಮದರಸಾಗಳನ್ನು ನೆಲಸಮಗೊಳಿಸಲಾಯಿತು.
									
											
							                     
							
							
			        							
								
																	ಈ ಸಂಬಂಧವಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಇಂದು ಮುಸ್ಲಿಂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.