Select Your Language

Notifications

webdunia
webdunia
webdunia
webdunia

ಗರ್ಭಿಣಿ ಹಸುವಿನ ಮೇಲೆ ರೇಪ್!

webdunia
ಕೋಲ್ಕತ್ತಾ , ಗುರುವಾರ, 1 ಸೆಪ್ಟಂಬರ್ 2022 (11:54 IST)
ಕೋಲ್ಕತ್ತಾ : ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ 29 ವರ್ಷದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
 
ದಕ್ಷಿಣ 24 ಪರಗಣ ಜಿಲ್ಲೆಯ ನಮ್ಖಾನಾ ಬ್ಲಾಕ್ನ ಉತ್ತರ ಚಂದನ್ಪಿಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪ್ರದ್ಯುತ್ ಭೂಯಾ ಎಂದು ಗುರುತಿಸಲಾಗಿದೆ.

ಇದೀಗ ಗರ್ಭಿಣಿ ಹಸುವಿನ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಕೆಲವು ದಿನಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಪ್ರದ್ಯುತ್, ತಮ್ಮ ಮನೆಯ ಹಿಂದೆ ಇರುವ ದನದ ಕೊಟ್ಟಿಗೆಗೆ ನುಗ್ಗಿ ತಮ್ಮ ಹಸುವಿನ ಮೇಲೆ “ಕ್ರೂರವಾಗಿ ಅತ್ಯಾಚಾರ” ಎಸಗಿದ್ದಾನೆ.

ಮಧ್ಯರಾತ್ರಿ ಸುಮಾರಿಗೆ ಅತ್ಯಾಚಾರಕ್ಕೊಳಗಾದ ಹಸು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ಉತ್ತರ ಚಂದನಪಿಡಿ ನಿವಾಸಿ ಆರತಿ ಭೂಯಾ ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಆರೋಪಿ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕಂಪಿಸಿದ ಭೂಮಿ,ಭಯಭೀತರಾದ ಜನತೆ!