Select Your Language

Notifications

webdunia
webdunia
webdunia
webdunia

ವಿಧಾನಸೌದದಲ್ಲಿ ಕೆ ಸಿ ರೆಡ್ಡಿ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ

ವಿಧಾನಸೌದದಲ್ಲಿ ಕೆ ಸಿ ರೆಡ್ಡಿ  ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ
bangalore , ಶನಿವಾರ, 25 ಫೆಬ್ರವರಿ 2023 (14:37 IST)
ಕರ್ನಾಟಕ ರಾಜ್ಯದ ಪ್ರಥಮ ಸಿಎಂ ಕೆಸಿ ರೆಡ್ಡಿ ಪ್ರತಿಮೆಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿದ್ರು.ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ‌ ಕೆ ಸಿ ರೆಡ್ಡಿ ಧೀಮಂತ ನಾಯಕರು ರಾಜ್ಯದ ಬೆಳವಣಿಗೆಗೆ ಭದ್ರ ಭೂನದಿ ಹಾಕಿದವರು ಕೆ ಸಿ ರೆಡ್ಡಿ.ಸ್ವತಂತ್ರ ಬಂದ ಮೊದಲ ಚುನಾವಣೆಯಲ್ಲಿ ಮುಖ್ಯ ಮಂತ್ರಿಯಾಗಿ ಕಾರ್ಯ ಮಾಡಿದವರು ‌ನಾಲ್ಕುವರೆ ವರ್ಷ ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.ಅವರು ರೈತ ಕುಟುಂಬದಿಂದ ಬಂದವರು.ರಾಜ್ಯದ ಮುಖ್ಯ ಮಂತ್ರಿಯಾಗಿ ಕೇಂದ್ರ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಜನರ ಸೇವೆಯ ಸಂಸ್ಥೆ ಸ್ಥಾಪನೆ ಮಾಡಿದವರು .ಕೇವಲ ನಾಲ್ಕುವರೆ ವರ್ಷದಲ್ಲಿ ದಕ್ಷ ಆಡಳಿತ ಕೊಟ್ಟಿದ್ದಾರೆ.ಕೆಸಿ ರೆಡ್ಡಿ ಅವರ ಜೀವನ ನಮಗೆಲ್ಲ ಪ್ರೇರಣೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ರು.
 
ಅಲ್ಲದೆ ಅವರ ಪ್ರತಿಮೆ ಪ್ರಥಮ ಬಾರಿ ಮಾಡಿದಾಗ ಸರಿಯಾಗಿ ಆಗಿರಲಿಲ್ಲ ಹಾಗಾಗಿ ಮತ್ತೊಮ್ಮೆ ಹೊಸ ಪ್ರತಿಮೆ ಸ್ಥಾಪನೆ ಸ್ಥಾಪನೆ ಮಾಡಿದೇವೆ.ಕಳೆದ ಜನ್ಮ ದಿನಕ್ಕೆ ಪ್ರತಿಮೆ ಆಗಬೇಕಿತ್ತು ಕಾರಣಾಂತರಗಳಿಂದ ಆಗಿಲ್ಲ.ಕರ್ನಾಟಕ ಕಟ್ಟಿದವರನ್ನು ಜನ ಮರಿಯಬಾರದು.ಅವರ ಎಲ್ಲಾ ಕೆಲಸ ಕಾರ್ಯಗಳನ್ನ ಮುಂದಿನ ಜನಾಂಗಕ್ಕೆ ಹೇಳ್ಬೇಕು.ಎಲ್ಲಾ ಮುಖ್ಯ ಮಂತ್ರಿಗಳ ಸಾಹಿತ್ಯ ರಚನೆ ಮಾಡಿ ಮಕ್ಕಳಿಗೆ ಪ್ರಚಾರ ಮಾಡುವುದು ಉತ್ತಮ.ಕರ್ನಾಟಕ ರಾಜ್ಯ ಆದಾಗ ಅವತ್ತಿನ ಜನ ಮನಸ್ಥಿತಿ ಯಂತೆ ಕರ್ನಾಟಕ ಏಕೀಕರಣ ಹೋರಾಟ ಸೇರಿದಂತೆ ಎಲ್ಲಾ ಮುಖ್ಯ ಮಂತ್ರಿಗಳು ತೆಗೆದುಕೊಂಡ ನಿರ್ಧಾರ ಪ್ರತಿಬಿಂಬಿಸಲು ಒಂದು ಮಯೂಸಿಂ ಸ್ಥಾಪನೆ ಮಾಡಬೇಕು.ಎಲ್ಲರ ಜೊತೆ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.ಅವರ ಹುಟ್ಟುರಲ್ಲೂ ಸಹ ಅವರ ಪ್ರತಿಮೆ ಸ್ಥಾಪನೆ ಮಾಡಿಸ್ತೀವಿ.ವಿಧಾನಸಭೆಯಲ್ಲೂ ಕೆಸಿ ರೆಡ್ಡಿ ಅವರ ಫೋಟೋ ಅಳವಡಿಕೆ ಮಾಡಲಾಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ತಿನ್ನುವು ಅನ್ನದ ಬೆಲ ಬಲು ದುಬಾರಿ