Publish Date: Sat, 25 Feb 2023 (12:10 IST)
Updated Date: Sat, 25 Feb 2023 (12:48 IST)
ಬೆಂಗಳೂರು : ಅರ್ಕಾವತಿ ರಿಡೂ ಪ್ರಕರಣದಲ್ಲಿ ಸಿದ್ದರಾಮಯ್ಯ ಅಕ್ರಮ ಮಾಡಿರುವುದು ಸತ್ಯ. ನಾನು ಸುಳ್ಳು ಹೇಳುತ್ತಿಲ್ಲ.
ಸಿದ್ದರಾಮಯ್ಯ ಅವರಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಅರ್ಕಾವತಿ ರಿಡೂ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅರ್ಕಾವತಿ ರಿಡೂ ಅಕ್ರಮದ ಬಗ್ಗೆ ಬೊಮ್ಮಾಯಿ ಹೇಳ್ತಿರೋದಲ್ಲ. ನ್ಯಾ.ಕೆಂಪಣ್ಣ ಆಯೋಗ ಹೇಳಿರೋದು. ನಾನು ಸುಳ್ಳು ಹೇಳ್ತಿಲ್ಲ. ಕಾಂಗ್ರೆಸ್ ಅವರು ಸುಳ್ಳು ಹೇಳ್ತಿರೋದು ಎಂದು ಕಿಡಿಕಾರಿದರು.