Select Your Language

Notifications

webdunia
webdunia
webdunia
webdunia

ಮೊಬೈಲ್ ಟವರ್ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

ಮೊಬೈಲ್ ಟವರ್ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ
ಚಿಕ್ಕಮಗಳೂರು , ಶನಿವಾರ, 25 ಫೆಬ್ರವರಿ 2023 (13:22 IST)
ಚಿಕ್ಕಮಗಳೂರು : ಮೊಬೈಲ್ ಟವರ್ ಗೆ ಆಗ್ರಹಿಸಿ ಗ್ರಾಮಸ್ಥರು ವಿನೂತನ ಅಭಿಯಾನ ನಡೆಸುತ್ತಿದ್ದಾರೆ. ಹೌದು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡ ಈ ಕಾಡಂಚಿನ ಗ್ರಾಮಸ್ಥರು ಈ ಅಭಿಯಾನ ಶುರು ಮಾಡಿದ್ದಾರೆ.

ಭರವಸೆ ಬೇಕಿಲ್ಲ, ಮೊಬೈಲ್ ಟವರ್ ಬೇಕು ಎಂದು ಆಗ್ರಹಿಸಿ ಓಟಿಪಿ ಬರದೇ ವೋಟಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳೆಂಬ ಹಣೆಪಟ್ಟಿ ಹೊತ್ತ ಬಲಿಗೆ, ಮೆಣಸಿನ ಹ್ಯಾಡ ಗ್ರಾಮಗಳಲ್ಲಿ ಇದೀಗ ಮತದಾನ ಬಹಿಷ್ಕಾರದ ಕೂಗು ಎದ್ದಿದೆ.

ಸುಮಾರು 70 ಕುಟುಂಬಗಳಿರುವ ಗ್ರಾಮದಲ್ಲಿ ದಶಕಗಳಿಂದ ಮೊಬೈಲ್ ನೆಟ್ ವರ್ಕ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ಗ್ರಾಮಸ್ಥರು ಹೈರಾಣಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋದಿಂದ ತಪ್ಪಿದ ಮತ್ತೊಂದು ಅನಾಹುತ!