Select Your Language

Notifications

webdunia
webdunia
webdunia
webdunia

ಅತ್ತೆಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಅಳಿಯ!

ಅತ್ತೆಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಅಳಿಯ!
ಬೆಂಗಳೂರು , ಶನಿವಾರ, 25 ಫೆಬ್ರವರಿ 2023 (12:51 IST)
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನಿಂದಲೇ ಅತ್ತೆ ಕೊಲೆಯಾದ ಘಟನೆ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ. ಏಳಲ್ ಅರಸಿ (48) ಕೊಲೆಯಾದ ಮಹಿಳೆ.
 
ಆರೋಪಿ ದಿವಾಕರ ಅತ್ತೆಯನ್ನು ಕೊಲೆಗೈದಿದ್ದು, ಇವರ ನಡುವಿನ ಕೌಟುಂಬಿಕ ಕಲಹ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ದಿವಾಕರನ ಹೆಂಡತಿ ತನ್ನ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದಳು.

ದಿವಾಕರ ಯಾರಿಗೂ ತಿಳಿಯದಂತೆ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದ. ಮಗು ಕಾಣಸದೆ ಕಂಗಾಲಾದ ಏಳಲ್ ಅರಸಿ ಹಾಗೂ ಆಕೆಯ ಮಗಳು ಮಗುವನ್ನು ಹುಡುಕಾಡಿದ್ದಾರೆ. 

ಇತ್ತ ಮಗು ಆರೋಪಿಯ ಬಳಿ ಇರುವುದನ್ನು ತಿಳಿದು ವಾಪಸ್ ಕಳಿಸುವಂತೆ ಕೇಳಿಕೊಂಡಿದ್ದರು. ಆದರೆ ದಿವಾಕರ ಮಗುವನ್ನು ವಾಪಸ್ ಕಳಿಸಲು ಒಪ್ಪದೆ ಗಲಾಟೆ ಮಾಡಿದ್ದಾನೆ. ಜಗಳ ತಾರಕ್ಕೇರಿ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಟು ಸತ್ಯ ಎದುರಿಸುವ ಕಾಲ ಬಂದಿದೆ : ಬೊಮ್ಮಾಯಿ ವಾಗ್ದಾಳಿ