Select Your Language

Notifications

webdunia
webdunia
webdunia
webdunia

25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್ನಲ್ಲಿ ಬಚ್ಚಿಟ್ಟ!

25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್ನಲ್ಲಿ ಬಚ್ಚಿಟ್ಟ!
ನವದೆಹಲಿ , ಮಂಗಳವಾರ, 14 ಫೆಬ್ರವರಿ 2023 (17:32 IST)
ನವದೆಹಲಿ : 25 ವರ್ಷದ ಯುವತಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಫ್ರಿಜರ್ನಲ್ಲಿ ಬಚ್ಚಿಟ್ಟ ಘಟನೆ ನೈಋತ್ಯ ದೆಹಲಿಯ ನಜಾಫ್ಗಢನಲ್ಲಿರುವ ಧಾಬಾದಲ್ಲಿ ನಡೆದಿದೆ.

ಮೃತ ಯುವತಿಯನ್ನು ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಢಾಬಾ ಮಾಲೀಕ (ಔತಿಟಿeಡಿ) 2-3 ದಿನಗಳ ಹಿಂದೆ ಯುವತಿಯನ್ನು ಕೊಂದು, ಆಕೆಯ ಶವವನ್ನು ಢಾಬಾದ ಫ್ರಿಜರ್ನಲ್ಲಿ ಇರಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಢಾಬಾದ ಮಾಲೀಕ ಸಾಹಿಲ್ ಗೆಹ್ಲೋಟ್ ಹಾಗೂ ಯುವತಿ ಸಂಬಂಧದಲ್ಲಿದ್ದರು. ಆದರೆ ಗೆಹ್ಲೋಟ್ಗೆ ಬೇರೊಬ್ಬ ಯುವತಿಯ ಜತೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಿಳಿದ ಗೆಹ್ಲೋಟ್ಗೆ ಹಾಗೂ ಯುವತಿಗೆ ಜಗಳ ನಡೆದಿದೆ.

ಈ ವೇಳೆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಕೋಪಗೊಂಡ ಗೆಹ್ಲೋಟ್ ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರಿಜರ್ನಲ್ಲಿ ಬಚ್ಚಿಟ್ಟಿದ್ದಾನೆ. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ : ಭೈರತಿ ಬಸವರಾಜ್