Publish Date: Tue, 31 Jan 2023 (18:12 IST)
Updated Date: Tue, 31 Jan 2023 (18:16 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದು, ಯುವಕನ ಕುಟುಂಬಸ್ಥರು ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿ ವಿಚಾರಕ್ಕೆ ಯುವಕನ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತಿಕೆರೆ ನಿವಾಸಿ ಗೋವಿಂದರಾಜು ನಾಪತ್ತೆಯಾದ ಯುವಕ. ನಾಪತ್ತೆಯಾದ ಯುವಕ ಗೋವಿಂದರಾಜು ಹಾಗೂ ಆರೋಪ ಕೇಳಿ ಬರುತ್ತಿರುವ ಯುವತಿ ಇಬ್ಬರೂ ಸಂಬಂಧಿಕರೇ ಆಗಿದ್ದಾರೆ. ಗೋವಿಂದರಾಜು ಯುವತಿಗೆ ಮೆಸೇಜ್ ಮಾಡಿದ್ದನಂತೆ. ಹೀಗಾಗಿ ಯುವತಿಯ ಸೋದರ ಮಾವ ಗೋವಿಂದರಾಜುನನ್ನು ಕರೆಸೆ ಮೆಸೇಜ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಆತನನ್ನು ಕರೆದೊಯ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಬ್ಯಾಡರಹಳ್ಳಿಯ ತೋಟದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಗೋವಿಂದರಾಜು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.