Select Your Language

Notifications

webdunia
webdunia
webdunia
webdunia

ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇದೆ ಎಂದು ಆ್ಯಸಿಡ್ ಸುರಿದು ಕೊಲೆ!

ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇದೆ ಎಂದು ಆ್ಯಸಿಡ್ ಸುರಿದು ಕೊಲೆ!
ಲಕ್ನೋ , ಗುರುವಾರ, 9 ಫೆಬ್ರವರಿ 2023 (10:51 IST)
ಲಕ್ನೋ : ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇರುವುದನ್ನು ನೋಡಿ ಆಕೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪೋಷಕರು ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕೌಶಂಬಿಯ ಟೆನ್ ಷಾ ಅಲಮಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಶ್ ಹಾಗೂ ಆತನ ಪತ್ನಿ ಶೋಭಾದೇವಿ ಸೇರಿ ತಮ್ಮ 21 ವರ್ಷದ ಮಗಳ ಮೇಲೆ ಆ್ಯಸಿಡ್ ಸುರಿದು ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಂಬಂಧಿಕರಿಬ್ಬರ ಸಹಾಯ ಪಡೆದಿದ್ದಾರೆ.

ಅದಾದ ಬಳಿಕ ತಮ್ಮ ಮಗಳು ಕಾಣೆ ಆಗಿದ್ದಾಳೆ ಎಂದು ನರೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಘಟನೆಗೆ ಸಂಬಂಧಿಸಿ ಪ್ರಕರಣ ಕೈಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಗ್ರಾಮದ ಹೊರಗಿನ ಕಾಲುವೆಯಿಂದ ವಿರೂಪಗೊಂಡ ಮೃತದೇಹವನ್ನು ಹೊರತೆಗೆಯಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವೈಟ್‍ಫಿಲ್ಡ್ ಮೆಟ್ರೋ ಸಂಚಾರ ಸದ್ಯದಲ್ಲೇ ಮುಕ್ತ